ಗಣೇಶನ ಮೆರವಣಿಗೆ ವೇಳೆಯಲ್ಲೇ “ಹುಬ್ಬಿಗೆ” ಚಾಕು ಇರಿತ: ಧಾರವಾಡ ಆಂಜನೇಯನಗರದಲ್ಲಿ ನಡೆದದ್ದೇನು..!!!??

ಧಾರವಾಡ: ವೈಯಕ್ತಿಕ ದ್ವೇಷದಿಂದ ಯುವಕರ ಗುಂಪೊಂದು ಯುವಕನ ಕಣ್ಣಿನ ಹುಬ್ಬಿನೊಳಗೆ ಹೋಗುವಂತೆ ಚಾಕು ಇರಿದು ಪರಾರಿಯಾಗಿರುವ ಘಟನೆ ಧಾರವಾಡದ ಕೆಲಗೇರಿಯ ಆಂಜನೇಯನಗರದಲ್ಲಿ ಸಂಭವಿಸಿದೆ.

ಗಣೇಶ ವಿಸರ್ಜನೆಯ ವೇಳೆಯಲ್ಲಿ ದಾಂಧಲೆಯಾಗಿದ್ದು ಪ್ರಜ್ವಲ ಎಂಬ ಯುವಕನ ಮೇಲೆ ವಿನಯ, ವಿಠ್ಠಲ, ವಿಜಯ ಸೇರಿದಂತೆ ಹಲವರು ಹಲ್ಲೆ ಮಾಡಿದ್ದು, ಕಣ್ಣಿಗೆ ಹುಬ್ಬಿನೊಳಗೆ ಚಾಕು ಹೊಕ್ಕಿದೆ.

ಗಂಭೀರ ಗಾಯದಿಂದ ನರಳುತ್ತಿದ್ದ ಪ್ರಜ್ವಲನನ್ನ ಕಿಮ್ಸಗೆ ರವಾನೆ ಮಾಡಲಾಗಿದ್ದು, ಧಾರವಾಡ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.