ಹಳೇಹುಬ್ಬಳ್ಳಿಯಲ್ಲಿ “500” ರೂ.ಗಾಗಿ “5” ಬಾರಿ ಚುಚ್ಚಿದ ಆಪ್ತಮಿತ್ರರು…!!!
1 min read500 ರೂಪಾಯಿಗಾಗಿ 5 ಬಾರಿ ಚಾಕು ಇರಿದ ಸ್ನೇಹಿತರು;ಹಳೇ ಹುಬ್ಬಳ್ಳಿಯಲ್ಲಿ ನೆತ್ತರು ಹರಿಸಿದ ಚಾಕು
ಹುಬ್ಬಳ್ಳಿ: 500 ರೂಪಾಯಿಗಾಗಿ ಯುವಕನೊಬ್ಬನಿಗೆ 5 ಬಾರಿ ಚಾಕು ಇರಿದ ಘಟನೆ ಶನಿವಾರ ರಾತ್ರಿ ಹಳೇಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದ್ದು, ಗಾಯಾಳು ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಹ್ಮದ್ ಮೊರಬ ಎಂಬ ಯುವಕನೇ ಚಾಕು ಇರಿತಕ್ಕೇ ಒಳಗಾಗಿದ್ದು, ಈತನ ಸ್ನೇಹಿತರೆ ಚಾಕು ಆಗಿದ್ದಾರೆ. ಶನಿವಾರ ರಾತ್ರಿ ಗೆಳೆಯರೆಲ್ಲರೂ ಒಟ್ಟಿಗೆ ಸೇರಿದಾಗ 500 ರೂಪಾಯಿ ಸಲುವಾಗಿ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದ ಹಾಗೆ ಮೊಹ್ಮದ್ಗೆ ಅಲ್ತಾಫ್, ಜಾಫರ್, ರಫೀಕ್, ರಿಜ್ಜು ಸೇರಿ ಚಾಕುವಿನಿಂದ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹ್ಮದ್ನನ್ನು ಸ್ಥಳೀಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಡಿಸಿಪಿ ನಂದಗಾವಿ, ಎಸಿಪಿ ಚಿಕ್ಕಮಠ ಹಾಗೂ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಭೇಟಿ ನೀಡಿ ಗಾಯಾಳುನಿಂದ ಘಟನೆಯ ಮಾಹಿತಿಯನ್ನು ಪಡೆದಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.