10th ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ರಗ್ಗು ಹೊತ್ತು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು….
1 min readಹುಬ್ಬಳ್ಳಿ: ಸೋಮವಾರದ ಪರೀಕ್ಷೆಗೆ ಹಾಜರಾಗುತ್ತಿದ್ದ ವೇಳೆಯಲ್ಲಿಯೇ ಪಾಲಕರು ಹಾಗೂ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿ ಆತಂಕ ಸೃಷ್ಟಿಸಿದ ಘಟನೆ ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯಲ್ಲಿ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಗ್ಗು ಹೊತ್ತು ಬೆಂಕಿ ಹಚ್ಚಿ ಹೆಜ್ಜೇನು ದಾಳಿಯಿಂದ ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ….
ಹುಬ್ಬಳ್ಳಿಯ ಎಕ್ಸಾಂ ಸೆಂಟರ್ ಮೇಲೆ ಹೆಜ್ಜೇನು ದಾಳಿ…
ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಸೇಂಟ್ ಮೈಕಲ್ ಸ್ಕೂಲ್ ನಲ್ಲಿ ದಾಳಿ ನಡೆಸಿದ ಹೆಜ್ಜೇನು…
ಇಂದು 10ನೆ ತರಗತಿ ಪರೀಕ್ಷೆ ಬರೆಯಲು ಬಂದಿದ್ದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಓರ್ವ ವಿದ್ಯಾರ್ಥಿ ಸೇರಿದಂತೆ ಪಾಲಕರ ಮೇಲೆ ದಾಳಿ ಮಾಡಿದ ಹೆಜ್ಜೇನು…
ಸ್ಥಳಕ್ಕೆ ಕೇಶ್ವಾಪುರ ಠಾಣೆಯ ಪೋಲಿಸರಿಂದ ಮಕ್ಕಳ ಪಾಲಕರ ರಕ್ಷಣೆ…
ಜೇನನ್ನು ಓಡಿಸಲು ಶಾಲೆಯಲ್ಲಿ ಬೆಂಕಿ ಹಾಕಿದ ಪೊಲೀಸರು…
ಶಾಲಾ ಶಿಕ್ಷಕರಿಗೂ ಕೂಡಾ ಕಡಿದ ಹೆಜ್ಜೇನು…
ಹೆಜ್ಜೇನು ದಾಳಿಯಿಂದ ಗಾಯಗೊಂಡವರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು…
ಹೆಜ್ಜೇನು ದಾಳಿಯ ರಕ್ಷಣೆಗಾಗಿ ಬ್ಲ್ಯಾಂಕೆಟ್ ಮೊರೆ ಹೋದ ಪೊಲೀಸರು..
ಸ್ಥಳಕ್ಕೆ ಎಸಿಪಿ ವಿನೋದ ಮುಕ್ತೇದಾರ್ ಭೇಟಿ…