ಕೊರೋನಾ ಹೆಚ್ಚಾಗಿದೆಯಾದರೂ SSLC ಪರೀಕ್ಷೆ ನಡೆಯುತ್ತವೆ: ಸಚಿವ ಸುರೇಶಕುಮಾರ ಖಡಕ್ ಉತ್ತರ
1 min readತುಮಕೂರ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಆತಂಕ ಪಡೋ ಅವಶ್ಯಕತೆ ಇಲ್ಲ. ನಿನ್ನೆಯ ವರದಿ ಪ್ರಕಾರ ಸೋಂಕಿತರ ಸಂಖ್ಯೆ 1874. ಅದ್ರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕೇವಲ 15 ಜನ. ಒಬ್ನೇ ಒಬ್ಬ ಪೇಷಂಟ್ ಕೂಡಾ ವೆಂಟಿಲೇಟರ್ ನಲ್ಲಿಲ್ಲ. ಆತಂಕ ಪಡೋ ವಿಚಾರ ಇಲ್ಲ. ಹೀಗಾಗಿ ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆ ಬರಿಬಹುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಕೊರೋನಾ ಆತಂಕಕಿಂತ ಎಚ್ಚರಿಕೆಯಿಂದ ಇರ್ಬೇಕು. ನೂರು ದಿನ ಶಾಲೆ ನಡೆಸುವ ತೀರ್ಮಾನವನ್ನ ಯಾರೂ ತೆಗೆದುಕೊಂಡಿಲ್ಲ. ಅದು ಕೇಂದ್ರದ ನಿಲುವೂ ಅಲ್ಲ. ಕೇಂದ್ರಕ್ಕೆ ಕೊಟ್ಟಿರೋ ಶಿಫಾರಸ್ಸು ಅಷ್ಟೇ, ಕೇಂದ್ರ ಅದನ್ನ ಅಧ್ಯಯನ ಮಾಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷ ಹೇಗಿರ್ಬೇಕು ಎಂಬುದರ ಬಗ್ಗೆ ತಂಡ ರಚಿಸಿ ಅಧ್ಯಯನ ಮಾಡಲಾಗುತ್ತಿದೆ. ತಂಡದ ಅಧ್ಯಯನದ ವರದಿ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ ಎಂದು ಹೇಳಿದರು.