ಪಾತ್ರೆ ತೊಳೆಯುವವರ ಮಗಳು ನಂಬರ್ ಒನ್: ಬಡತನದಲ್ಲಿ ಅರಳಿದ ಕುಸುಮ ಬಾಲೆ ಯಾರೂ ಗೊತ್ತಾ..?
ವಿಜಯಪುರ: ಯಲಗೂರೇಶ್ವರ ವಿದ್ಯಾವರ್ಧಕ ಸಂಘದ ವಿಕಾಸ ಬಾಲಕಿಯರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಸೌಮ್ಯಾ ಜವಳಗಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುಪಮ ಸಾಧನೆ ತೋರುವ ಮೂಲಕ ಮಾದರಿಯಾಗಿದ್ದಾರೆ.
ಗಾಂಧಿನಗರದ ಆಶ್ರಯ ಕಾಲೋನಿಯ ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಬಡ ಕುಟುಂಬದ ಸಂಸಾರದ ನೊಗವನ್ನು ಹೊತ್ತು ಬಡತನದಲ್ಲಿಯೇ ಕಷ್ಟದ ಜೀವನ ನಡೆಸುತ್ತಿರುವ ತಾಯಿಯ ಪ್ರತಿಭಾನ್ವಿತ ಪುತ್ರಿ ಪರೀಕ್ಷೆಯಲ್ಲಿ ಅನನ್ಯ ಸಾಧನೆ ಮಾಡಿದ್ದು, ಎಲ್ಲರಿಗೂ ಮಾದರಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.96 ರಷ್ಟು ಅಂಕ ಪಡೆದುಕೊಂಡಿದ್ದಾರೆ. ತಾಯಿ ಕಷ್ಟದಿಂದಲೇ ಮಗಳನ್ನು ಓದಿಸುತ್ತಿದ್ದಾರೆ. ಮನೆ-ಮನೆಗೆ ತೆರಳಿ ಪಾತ್ರೆ ತೊಳೆಯುವ ಕಾಯಕ ನಿರ್ವಹಿಸುವ ಈ ತಾಯಿ ತಮ್ಮ ಮಗಳ ಸಾಧನೆವೂ ಪ್ರತಿಭೆಗೆ ಬಡತನದ ಹಂಗಿಲ್ಲ ಎಂದು ತೋರಿಸಿದ್ದಾಳೆ.
1ನೇ ತರಗತಿಯಿಂದಲೂ 10ನೇತರಗತಿಯಿಂದಲೂ ವಿಕಾಸ ಶಾಲೆಯಲ್ಲಿಯೇ ಅಧ್ಯಯನ ಮಾಡಿರುವ ಸೌಮ್ಯಾ ಅವರ ಬಡತನ ಪರಿಸ್ಥಿತಿಯನ್ನು ಕಂಡು 1ನೇ ತರಗತಿಯಿಂದ 10ನೇ ತರಗತಿಯವರೆಗೂ ಎಲ್ಲ ವಿದ್ಯಾಭ್ಯಾಸದ ಖರ್ಚನ್ನು ಸಂಸ್ಥೆ ನೋಡಿಕೊಂಡಿದೆ. ಬಡತನದಲ್ಲಿ ಅರಳಿರುವ ಪ್ರತಿಭಾ ಕುಸುಮ ಸೌಮ್ಯಾಳಿಗೆ ಭವಿಷ್ಯದಲ್ಲಿ ಐಎಎಸ್ ಆಗುವ ಗುರಿ ಹೊಂದಿದ್ದಾರೆ.