ಸೋಮವಾರವೇ ಎಸ್‌ಎಸ್‌ಎಲ್‌ಸಿ ರಿಸಲ್ಟ್: ಎಂಟು ಲಕ್ಷ ವಿದ್ಯಾರ್ಥಿಗಳ ಭವಿಷ್ಯ
ಬೆಂಗಳೂರು: ಸಾಕಷ್ಟು ವಿರೋಧದ ನಡುವೆಯೂ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇದೇ ಸೋಮವಾರ ಪ್ರಕಟಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಕೊರೋನಾ ವೈರಸ್ ನಡುವೆ ಪರೀಕ್ಷೆ ನಡೆಸಬಾರದೆಂದು ಬಹುತೇಕ ಪಾಲಕರು ಕೋರಿದ್ದರು. ಆ ನಡುವೆಯೂ ಸರಕಾರ ಪರೀಕ್ಷೆ ನಡೆಸಿ, ಯಾವುದೇ ಘಟನೆಗಳು ನಡೆಯದಂತೆ ಜಾಗೃತೆ ವಹಿಸಿತ್ತು. ಇದೀಗ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ.
ಕೆಲವು ಸಮಸ್ಯೆಗಳನ್ನ ಮೀರಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಯಾವಾಗ ಬರತ್ತೆ ಎಂಬುದು ಕೂಡಾ ಯಕ್ಷಪ್ರಶ್ನೆಯಾಗಿತ್ತು. ಇದಕ್ಕೂ ಇಲಾಖೆ ತೆರೆ ಎಳೆದಿದೆ.