ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ ತಿಂಗಳಲ್ಲಿ ಬೇಡ: ರಜತ ಉಳ್ಳಾಗಡ್ಡಿಮಠ ಆಗ್ರಹ

ಹುಬ್ಬಳ್ಳಿ: ಕೊರೊನಾ ಸೋಂಕು ನಿರ್ಬಂಧದಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲ ವಾರ ಬಹಳ ನಿರ್ಣಾಯಕವೆಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಭಾರತಿಯ ವೈದ್ಯಕೀಯ ಸಂಸ್ಥೆ ಬಿಡುಗಡೆಗೊಳಿಸಿದ ಹೇಳಿಕೆ ಪ್ರಕಾರ ಕೋವಿಡ್ 19 ಜೂನ್ ಮತ್ತು ಜುಲೈನಲ್ಲಿ ಉತ್ತುಂಗಕ್ಕೆ ಏರುವ ಅಪಾಯವಿದೆ. ಕೊರೋನಾ ಸಂಬಂಧಿಸಿದ ವಿದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗ ಕಳಕೊಂಡವರು, ವೃತ್ತಿಪರರು, ಉದ್ದಿಮೆದಾರರು ಸುಮಾರು 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಅವರಿಗೆಲ್ಲರಿಗೂ ಕ್ವಾರಂ ಟೈನ್ ಮತ್ತು ಐಶೋಲೆಷನ್ ಮಾಡಲಿರುವುದರಿಂದ, ಎಲ್ಲಿಯಾದರೂ ಹೆಚ್ಚು ಕಡಿಮೆಯಾದರೆ ರೋಗವು ಹರಡುವ ಸಂಭವವಿದೆ. ಇದನ್ನೆಲ್ಲಾ ಗಮನದಲ್ಲಿಇಟ್ಟುಕೊಂಡು, ಇದೊಂದು ದೀರ್ಘ ಕಾಲೀನ ಹೋರಾಟವಾಗಿರುವುದರಿಂದ, ಪ್ರಾಯೋಗಿಕತೆ ಮತ್ತು ವಾಸ್ತವಿಕತೆಯನ್ನು ಅರಿತು ಹೆಜ್ಜೆಯಿಡಿ. ವಲಸೆ ಕಾರ್ಮಿಕರ ವಿಚಾರದಲ್ಲಿ ಆದ ತಪ್ಪು, ಮತ್ತೆ ಇಲ್ಲಿ ಪುನರಾವರ್ತನೆ ಆಗುವುದು ಬೇಡ. ಪರೀಕ್ಷೆಗಳನ್ನು ಮುಂದೂಡುವುದು ಉಚಿತ ಮತ್ತು ವಿವೇಕ ಕ್ರಮವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಎಚ್ಚರಿಸಿದ್ದಾರೆ.
ಹಾಗೆನೇ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕಗಳನ್ನು ಹೆಚ್ಚಿಸದಿರುವಂತೆ ಸರ್ಕಾರ ನೀಡಿರುವ ನಿರ್ದೇಶನವನ್ನು ಆಡಳಿತ ಮಂಡಳಿಯು ಗಂಭೀರವಾಗಿಪರಿಗಣಿಸಿದಂತೆ ಇಲ್ಲ. ಕೊರೊನಾ ವೈರಾಣು ಸೋಂಕಿನ ಭೀತಿಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪೋಷಕರಿಗೆ ಶಾಲಾ ಶುಲ್ಕದ ಹೆಚ್ಚಳ ಹೊರೆಯಾಗಿ ಪರಿಣಮಿಸುವುದರಿಂದ, ಈ ಬಾರಿ ಶುಲ್ಕವನ್ನು ಹೆಚ್ಚಿಸದಿರುವಂತೆ ಸರ್ಕಾರ ತಿಳಿಸಿದೆ. ಆದರೆ ಖಾಸಗಿ ಶಾಲೆಗಳು ಶುಲ್ಕ ವನ್ನು ಹೆಚ್ಚಿಸಿದಲ್ಲದೆ ಮೂರು ದಿನಗಳಲ್ಲಿ ಶುಲ್ಕವನ್ನು ಕಟ್ಟಿ ಸೀಟ್ ಅನ್ನು ಖಾತ್ರಿ ಮಾಡಬೇಕೆಂದು ತಾಕೀತನ್ನು ಕೂಡ ಮಾಡಿದೆ. ಸರ್ಕಾರದ ಸೂಚನೆ ಬರದೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಸುವಂತಿಲ್ಲ. ಆದರೆ ಆನ್ ಲೈನ್ ಮೂಲಕ ಸೀಟ್ ಗಳನ್ನು ಭರ್ತಿಮಾಡುವ ಪ್ರಕ್ರಿಯೆ ಧಾರಾಳವಾಗಿ ನಡೆಯುತ್ತಿವೆ. ಸರ್ಕಾರದ ಸೂಚನೆಗೆ ಕಿಮ್ಮತ್ ಬೆಲೆಯನ್ನುಖಾಸಗಿ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯ ನೀಡಲಿಲ್ಲ. ಸರ್ಕಾರವು ಕೂಡಲೇ ಮಧ್ಯೆ ಪ್ರವೇಶ ಮಾಡಬೇಕಎಂದು ರಜತ ಒತ್ತಾಯಿಸಿದ್ದಾರೆ.