ತೆಲಂಗಾಣದಲ್ಲೂ SSLC ಪರೀಕ್ಷೆ ಕ್ಯಾನ್ಸಲ್: ಇದ್ದವರೆಲ್ಲರನ್ನೂ ಪಾಸ್ ಮಾಡಿದ ಸರಕಾರ
ಹೈದರಾಬಾದ್: ಕೊರೋನಾ ವೈರಸ್ ಮಹಾಮಾರಿಗೆ ಇಡೀ ದೇಶವೇ ತಲ್ಲಣಗೊಂಡಿದ್ದು, ಅದೇ ಕಾರಣಕ್ಕೆ ಹಲವು ರಾಜ್ಯಗಳು ತಮ್ಮ ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನ ಜರುಗಿಸುತ್ತಿವೆ. ಹೀಗಾಗಿ, ತೆಲಂಗಾಣ ಕೂಡ ಹತ್ತನೇ ವರ್ಗದ ಪರೀಕ್ಷೆಯನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ತೆಲಂಗಾಣ ರಾಜ್ಯದಲ್ಲಿ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೇ ಎಲ್ಲ ವಿದ್ಯಾರ್ಥಿಗಳನ್ನ ಪಾಸ್ ಮಾಡುವಂತೆ ಮುಖ್ಯಮಂತ್ರಿ ಚಂದ್ರಶೇಖರ ಆದೇಶ ನೀಡಿದ್ದಾರೆ.
ಇಂಟರನಲ್ ಅಸೈನಮೆಂಟ್ ಫಲಿತಾಂಶದ ಆಧಾರದ ಮೇಲೆ ಗ್ರೇಡ್ ನೀಡಬೇಕೆಂದು ತಿಳಿಸಿದ್ದು, 5,34,903 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಪಾಸ್ ಆಗುತ್ತಿದ್ದಾರೆ.