SSLC ಪೂರಕ ಪರೀಕ್ಷೆ ಮುಂದೂಡಿಕೆ
1 min readಬೆಂಗಳೂರು: ವಿವಿಧ ರೈತ ಸಂಘಟನೆಗಳು ಸೋಮವಾರ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯನ್ನ ಮುಂದೂಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ರಾಜ್ಯದ ಪ್ರತಿ ಡಿಡಿಪಿಐಯವರಿಗೆ ಸೂಚನೆ ನೀಡಿರುವ ಮಂಡಳಿ, ಸೋಮವಾರ ನಡೆಯಬೇಕಾಗಿದ್ದ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ಹಿಂದೂಸ್ತಾನಿ ಸಂಗೀತ ಪರೀಕ್ಷೆಯನ್ನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೂಡಲಾಗಿದೆ ಎಂದು ತಿಳಿಸಿದೆ.
ಈ ವಿಷಯವನ್ನ ಪಾಲಕರಿಗೆ ತಿಳಿಸಲು ಇರುವ ಎಲ್ಲ ಮಾರ್ಗವನ್ನ ಬಳಸಿಕೊಳ್ಳಿ ಎಂದು ಮಂಡಳಿ ತಿಳಿಸಿದ್ದು, ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮಾಡಬೇಕಿದೆ.