ವಿದ್ಯಾಕಾಶಿ ಹೆಸರಿಗಷ್ಟೇನಾ..! ಸರಕಾರಿ ಶಾಲೆಗಳಲ್ಲಿ ನಡೆಯತ್ತಿರುವುದೇನು..! ಹಣ ಪೀಕುವುದಷ್ಟೇನಾ..!
ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ “ಬಿ” ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಗಿದೆ. ವರ್ಷ ವರ್ಷ ಕಡಿಮೆ ಸ್ಥಾನಕ್ಕೆ ಇಳಿಯುತ್ತಿರುವುದಕ್ಕೆ ಕಾರಣವನ್ನ ಹುಡುಕಬೇಕಾದ ಮನಸ್ಥಿತಿಯನ್ನ ಈಗಲಾದರೂ ಶಿಕ್ಷಣ ಇಲಾಖೆ ಮುಂದಾಗಬೇಕಿದೆ.
ದಿನ ಬೆಳಗಾದರೇ ಜಾಹೀರಾತುಗಳನ್ನ ನೀಡಿ ಪಾಲಕರನ್ನ ಸೆಳೆಯಲು ಮುಂದಾಗುವ ಖಾಸಗಿ ಸಂಸ್ಥೆಗಳು ಕೂಡ ಇಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಏಕೆಂದರೇ, ಅವರ ಸ್ಥಿತಿಯೂ ಅದೇ ಆಗಿದೆ.
ಜಿಲ್ಲೆಯಲ್ಲಿ ಬಹುತೇಕ ಜಿಲ್ಲಾವಾರು ಪ್ರಗತಿ ನೋಡಿದಾಗಲೂ ಯಾವುದೇ ರೀತಿಯ ಬದಲಾವಣೆ ಕಂಡು ಬರುತ್ತಿಲ್ಲ. ಕೊರೋನಾದ ನೆಪ ಹೇಳುತ್ತ ಕೂತರೇ, ಕೊರೋನಾ ಬೇರೆ ಜಿಲ್ಲೆಯಲ್ಲೂ ಇತ್ತು ಎಂಬುದನ್ನ ಸ್ಮರಿಸಿಕೊಳ್ಳಬೇಕಿದೆ.
ಖಾಸಗಿ ಶಾಲೆಗಳಲ್ಲಿ ಮೂರ್ನಾಲ್ಕು ಜನರು ಹೆಚ್ಚು ಅಂಕ ಪಡೆದಿರುವುದನ್ನೇ ಮಾರುಕಟ್ಟೆ ಮಾಡಿಕೊಳ್ಳಲು ಕೆಲವರು ನಿಲ್ಲುತ್ತಾರೆ ಎಂಬುದನ್ನ ಪಾಲಕರು ಅರಿತುಕೊಳ್ಳಬೇಕಿದೆ. ಮಕ್ಕಳನ್ನ ಓದಿಸಬೇಕೆಂಬ ಪ್ರೀತಿಯನ್ನೇ ಕೆಲವು ಖಾಸಗಿ ಸಂಸ್ಥೆಯವರು “ಹಣ”ವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಾರೆಂಬ ಕಲ್ಪನೆಯಿರಬೇಕಾಗಿದೆ.
ಮಕ್ಕಳ ಭವಿಷ್ಯದ ಚೆಲ್ಲಾಟವಾಡುವ ಬದಲು ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮುಗುಮ್ಮಾಗಿ ಕೂಡುವ ಬದಲು ಬದಲಾವಣೆಯನ್ನ ಬಯಸಬೇಕಿದೆ. ಇಲ್ಲದಿದ್ದರೇ ಧಾರವಾಡ ಜಿಲ್ಲೆಯ ಮಾನವನ್ನ ಇನ್ನಷ್ಟು ಕಳೆದುಕೊಳ್ಳಬೇಕಾಗತ್ತೆ ಎಂಬುದನ್ನ ಅರಿತುಕೊಳ್ಳಬೇಕಿದೆ.
ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪಡೆದ ಅಂಕಗಳು ಮತ್ತು ಸರಕಾರಿ ಶಾಲೆ ವಿದ್ಯಾರ್ಥಿಗಳು ಪಡೆದ ಅಂಕಗಳನ್ನ ನೋಡಿಯಾದರೂ ಅರಿತುಕೊಳ್ಳಿ..