ಕೊವೀಡ್-19 ಸಂಖ್ಯೆ ಹೆಚ್ಚಳ: ಆರೋಗ್ಯ ಸಚಿವ ಬಿ.ಶ್ರೀರಾಮುಲು
1 min readಚಿತ್ರದುರ್ಗ: ಕೊವೀಡ್-19 ಜಾಸ್ತಿ ಆಗುವ ಲಕ್ಷಣ ಕಂಡು ಬರುತ್ತಿವೆ. ಕಂಟ್ರೋಲ್ ಮಾಡಲು ಓಪನ್ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರಿನಲ್ಲಿ ಅಂಗವಿಕಲ ಮಕ್ಕಳಿಗೆ ಕಿಟ್ ವಿತಹರಣೆ ಭೇಟಿ ವೇಳೆ ಪ್ರತಿಕ್ರಿಯೆ ನೀಡಿದ ಸಚಿವರು, ಸಿಂಟಮ್ ಕಂಡು ಬಂದವರಿಗೆ ತಕ್ಷಣ ಕರೆದುಕೊಂಡು ಹೋಗಲು ಅವಕಾಶ ಮಾಡಲು ನಾಳಿನ ಟಾಸ್ಕ್ ಪೋರ್ಸ್ ನಲ್ಲಿ ಚರ್ಚೆ ಮಾಡುತ್ತೇವೆ. ಅನ್ಯ ರಾಷ್ಟ್ರಗಳಲ್ಲಿ ಮಾಡಿದ ಹಾಗೆ ಓಪನ್ ಆಸ್ಪತ್ರೆ, ಫಿಲ್ಡ್ ಆಸ್ಪತ್ರೆ ತೆರೆಯಲು ಯೋಚಿಸಿದ್ದೇವೆ. ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಗುತ್ತದೆ. ಜುಲೈ ವೇಳೆಗೆ ಕೊರೋನಾ ಪ್ರಮಾಣ ಜಾಸ್ತಿಯಾಗುವ ಯೋಚನೆಯಿಂದ ನಿರ್ಧಾರ ಮಾಡಲು ಚಿಂತನೆ ನಡೆದಿದೆ. ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಇಲಾಖೆ ನಿರ್ಧರಿಸಿದೆ. ಕೊರೋನಾ ವಿಚಾರವಾಗಿ ಪೊಲೀಸರು, ಆಶಾ ಕಾರ್ಯಕರ್ತರು, ವೈಧ್ಯರಿಗೆ 50 ಲಕ್ಷ ಇನ್ಸೂರೆನ್ಸ್ ಮಾಡಲಾಗಿದೆ ಎಂದರು.