ಶ್ರೀರಾಮಸೇನೆ ಜಿಲ್ಲಾಧ್ಯಕ್ಷನಿಗೆ ಗುಂಡಿಟ್ಟದ್ದು “ಮೂವರು ಹಿಂದೂಗಳೇ’- ಕಮೀಷನರ್ ಹೇಳಿಕೆ

ಬೆಳಗಾವಿ: ಜಿಲ್ಲೆಯ ಶ್ರೀರಾಮಸೇನೆಯ ಜಿಲ್ಲಾ ಅಧ್ಯಕ್ಷ ರವಿ ಕೋಕಿತ್ಕರ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನ ಹೆಡಮುರಿಗೆ ಕಟ್ಟಿದ್ದು, ಮೂವರು ಹಿಂದೂಗಳೇ ಎಂದು ಗೊತ್ತಾಗಿದೆ.
ಹಣಕಾಸಿನ ವಿಚಾರವಾಗಿ ಇದ್ದ ಗೊಂದಲಗಳೇ ಘಟನೆಗೆ ಕಾರಣವೆಂದು ಗೊತ್ತಾಗಿದೆ. ಬಂಧಿತರನ್ನ ಅಭಿಜಿತ ಸೋಮನಾಥ ಬಾತಕಾಂಡೆ, ರಾಹುಲ ನಿಂಗಾಣಿ ಕೊಡಚವಾಡ ಹಾಗೂ ಜ್ಯೋತಿಬಾ ಗಂಗಾರಾಮ ಮುತಗೇಕರ ಎಂದು ಗುರುತಿಸಲಾಗಿದೆ.
ಶ್ರೀರಾಮಸೇನೆ ಅಧ್ಯಕ್ಷ ರವಿ ಹಾಗೂ ಅಭಿಜಿತ ಬಾತಕಾಂಡೆ ಅವರಿಬ್ಬರ ನಡುವಿನ ಹಣಕಾಸಿನ ವಿಷಯವಾಗಿ ಘಟನೆ ನಡೆದಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹೇಳಿದರು.