“ಸ್ಟೇಶನ್ ಬೇಲ್” ತುಗೊಂಡ್ ಹೊರಗ್ ಅದೇನ್ರಿ: ಮೀಡಿಯಾದವರ ಮುಂದೆ ಹಾಜರಾದ ಶ್ರೀನಿವಾಸ ಬೆಳದಡಿ…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶದ ದಿನ ನಡೆದ ಸಣ್ಣದೊಂದು ಗಲಾಟೆಯನ್ನ ಉದ್ದೇಶಪೂರ್ವಕವಾಗಿ ದೊಡ್ಡದಾಗಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿಯ ಪತಿ ಶ್ರೀನಿವಾಸ ಬೆಳದಡಿ ಹೇಳಿದರು.
ವಿಜಯ ಗುಂಟ್ರಾಳ ಪತ್ನಿ ಸೇರಿದಂತೆ ಮನೆ ಮಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಇವರನ್ನ ಬಂಧನ ಮಾಡುತ್ತಿಲ್ಲವೆಂದು ಹಲವರು ಪ್ರತಿಭಟನೆ ನಡೆಸುತ್ತ ಗೃಹ ಸಚಿವರಿಗೂ ಮನವಿ ನೀಡಿದ ನಂತರ, ಮೀಡಿಯಾದವರ ಮುಂದೆ ಶ್ರೀನಿವಾಸ ಬೆಳದಡಿ ಹಾಜರಾಗಿ ಹೇಳಿದ್ದಿಷ್ಟು…
ಮಕ್ಕಳು ಆರಂಭಿಸಿದ ಜಗಳ ಸ್ವಲ್ಪ ಹೆಚ್ಚಾಯಿತು. ಆದರೆ, ಜಗಳ ಮಾಡುವ ಉದ್ದೇಶವಿಲ್ಲ. ಪ್ರಕರಣದಲ್ಲಿ ಕೆಲವು ಅಮಾಯಕರನ್ನ ಹಾಕಿದ್ದಾರೆ. ಅವರನ್ನ ಕೈ ಬಿಡಬೇಕೆಂದು ಮನವಿ ಮಾಡಿದ್ರು.