‘ತಕಧಿಮಿತಾ…’ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ವೀಡಿಯೋ ವೈರಲ್…!

ಧಾರವಾಡ: ತಾಲೂಕಿನ ಸತ್ತೂರ ಬಳಿಯ ಉದಯಗಿರಿಯಲ್ಲಿ ಮಹಿಳೆಯೋರ್ವಳನ್ನ ಜೆಡಿಎಸ್ ಪಕ್ಷದ ಪಾಲಿಕೆಯ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ನಡುರಸ್ತೆಯಲ್ಲೇ ಕೈ ಹಿಡಿದು ಎಳೆದಾಡಿರುವ ವೀಡಿಯೋ ವೈರಲ್ ಆಗಿದೆ.
https://www.facebook.com/100045805057267/videos/284200726497263/
ಉದಯಗಿರಿ ನಿವಾಸಿ ಅನುಮತಿ ಅತ್ತಿಗೇರಿ ಎಂಬ ಮಹಿಳೆಯನ್ನ ನಡು ರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿರುವ ವೀಡಿಯೋ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.