ಲಾರಿ ಅಪಘಾತದಲ್ಲಿ ಪೊಲೀಸ್ ದುರ್ಮರಣ: ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ….!

ಹುಬ್ಬಳ್ಳಿ: ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಲಾರಿಯೊಂದು ಹಾಯ್ದು ಓರ್ವ ಪೊಲೀಸ್ ಸಾವಿಗೀಡಾಗಿ, ಮತ್ತಿಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೀಡಿದರು.
ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ಮೂವರು ಒಂದೇ ಬೈಕಿನಲ್ಲಿ ಹೋಗಿ, ರಸ್ತೆಯಲ್ಲಿ ಬಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಈ ಮಾಹಿತಿಯನ್ನ ಆಧರಿಸಿ, ಸ್ಥಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಎಸ್ಪಿ ಅವರ ಹೇಳಿಕೆ ಇಲ್ಲಿದೆ ನೋಡಿ..
ಬೈಕಿನಲ್ಲಿ ಹೋಗಿದ್ದ ಮೂವರ ಪೈಕಿ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನಮಂತಪ್ಪ ಗಂಗಿವಾಳ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಈ ಬಗ್ಗೆ ಮಾಹಿತಿ ಬಂದ ನಂತರ ಪೊಲೀಸ್ ಪಂಡಿತ್ ಕಾಸರ್, ಹೆಡ್ ಕಾನ್ಸಟೇಬಲ್ ಶಂಕರ ಹಾಗೂ ಮತ್ತೋರ್ವ ಪೊಲೀಸ್ ವಾಘ ಎನ್ನುವವರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಇದೇ ಸಮಯದಲ್ಲಿ ಲಾರಿಯೂ ವೇಗವಾಗಿ ಬಂದು ಇವರ ಮೇಲೆ ಹಾಯ್ದು ಪರಾರಿಯಾಗಿತ್ತು.
ಅಸಲಿಗೆ ಗಂಗಿವಾಳದ ಇಬ್ಬರು ಮೃತರಾಗಲು ಲಾರಿ ಕಾರಣವೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಗಾಯಗೊಂಡಿರುವ ಇಬ್ಬರು ಪೊಲೀಸರು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.