ಹುಬ್ಬಳ್ಳಿ ಕಿಮ್ಸನಲ್ಲಿ ‘ಒಂಟಿಗಾಲಿನ’ ಮಗುವಿನ ಜನನ…!

ಹುಬ್ಬಳ್ಳಿ: ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಒಂಟಿಗಾಲಿನ ಅಪರೂಪದ ಮಗುವಿನ ಜನನವಾಗಿದ್ದು, ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಇಂದು ಮಧ್ಯಾಹ್ನ ಹೇರಿಗೆ ನೋವಿನಿಂದ ಬಳಲುತಿದ್ದ ಮಹಿಳೆ ಕಿಮ್ಸ್ ಗೆ ದಾಖಲಾಗಿದ್ದರು. ಪ್ರಸವದ ನೋವುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಸಿಜರೀನ್ ಮುಖಾಂತರ ಹೆರಿಗೆ ಮಾಡಿಸಲಾಗಿತ್ತು. ಮಗು ವಿಚಿತ್ರ ಅಂಗಾಗದ ಮೂಲಕ ಜನಸಿದ್ದರಿಂದ ವೈದ್ಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ. ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲವಾಗಿವೆ.