ಪ್ರಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣಂ ಸ್ಥಿತಿ ಗಂಭೀರ: ಮತ್ತೆ ಕೋಮಾದಲ್ಲಿ
1 min readಚೆನೈ: ಕಳೆದ 5ನೇ ತಾರೀಖಿನಿಂದ ಖಾಸಗಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣಂ ಸ್ಥಿತಿ ಗಂಭೀರವಾಗಿದ್ದು, ಸಧ್ಯ ಕೋಮಾದಲ್ಲಿದ್ದು ವೆಂಟಿಲೇಟರ್ ಮೂಲಕ ಚಿಕತ್ಸೆ ನೀಡಲಾಗುತ್ತಿದೆ.
ಎಂಜಿಎಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಅವರ ಆರೋಗ್ಯದಲ್ಲಿ ತೀವ್ರ ಥರ ಏರುಪೇರಾಗುತ್ತಿದ್ದು, ಇದೀಗ ಮತ್ತೆ ಕೋಮಾಗೆ ತೆರಳಿದ್ದಾರೆಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಕಳೆದ ಐದು ದಿನದ ಹಿಂದೆ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ ಎಂದು ಸ್ವತಃ ಅವರ ಪುತ್ರ ಚರಣ ಮಾಹಿತಿಯನ್ನ ನೀಡಿದ್ದರು. ಅಷ್ಟೇ ಅಲ್ಲ, ಐಸಿಯುನಿಂದ ಶಿಫ್ಟ್ ಕೂಡಾ ಮಾಡಲಾಗಿತ್ತು.
ಇಂದು ಮತ್ತೆ ಉಸಿರಾಟದ ತೀವ್ರ ತೊಂದರೆಯಾಗಿ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು, ಹಿರಿಯ ವೈಧ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಸುಬ್ರಹ್ಮಣಂ ಅವರಿಗೆ ಆರೋಗ್ಯ ಸುಧಾರಿಸಲಿ ಎಂದು ದೇಶಾಧ್ಯಂತ ಅಭಿಮಾನಿಗಳು ಪೂಜೆ-ಪುನಸ್ಕಾರ ನಡೆಸುತ್ತಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.