Posts Slider

Karnataka Voice

Latest Kannada News

ಓ ಗೆಳೆಯ.. ಜೀವದ ಗೆಳೆಯಾ.. ‘SPB’ ಸ್ಥಿತಿ 24ಗಂಟೆಯಿಂದ ಮತ್ತಷ್ಟು ಗಂಭೀರ

Spread the love

ಚೆನೈ: ಕಳೆದ 49 ದಿನಗಳಿಂದ ಆಸ್ಪತ್ರೆಯಲ್ಲಿಯೇ ಇರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣಂ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ ಎಂದು ಎಂಜಿಎಂ ಹೆಲ್ತ್ ಕೇರ್ ಬುಲೆಟಿನ್ ಬಿಡುಗಡೆ ಮಾಡಿದೆ.

ಈ ಸಂಜೆ 6.30 ಗಂಟೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಆಸ್ಪತ್ರೆಯು, ಕಳೆದ 24 ಗಂಟೆಯಿಂದ ಎಸ್ಪಿಬಿಯವರಿಗೆ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಅವರನ್ನ ತೀವ್ರ ನಿಗಾ ಘಟಕದಲ್ಲಿಡಲಾಗಿದ್ದು, ಮತ್ತಷ್ಟು ವೈಧ್ಯರು ನಿಗಾ ವಹಿಸಿದ್ದಾರೆಂದು ಮಾಹಿತಿ ನೀಡಲಾಗಿದೆ.

ಎಂಜಿಎಂ ಆಸ್ಪತ್ರೆಯ ಡಾ.ಅನುರಾಧಾ ಭಾಸ್ಕರನ್ ಈ ಮಾಹಿತಿಯನ್ನ ನೀಡಿದ್ದು, ಎಸ್.ಪಿ.ಬಾಲಸುಬ್ರಹ್ಮಣಂ ಆರೋಗ್ಯದ ಬಗ್ಗೆ ಮತ್ತಷ್ಟು ಅನುಮಾನ ಮೂಡುವಂತಾಗಿದೆ.

ಕಳೆದ ಆಗಸ್ಟ್ 5ರಿಂದ ಆಸ್ಪತ್ರೆಯಲ್ಲೇ ಇರುವ ಎಸ್ಪಿಬಿಯವರ ಆರೋಗ್ಯ ಸುಧಾರಣೆಯಾಗಲಿ ಎಂದು ದೇಶದ ಹಲವೆಡೆ ಪೂಜೆ-ಪುನಸ್ಕಾರಗಳು ನಡೆದಿದ್ದವು. ಹಲವು ನಟ-ನಟಿಯರು ಬಾಲು ಸರ್ ಆರೋಗ್ಯವಾಗಿ ಎಂದು ಬೇಡಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *