ಸ್ಪಾ ರೇಡ್ ಆಗುವ ಮುನ್ನ ಬ್ಲ್ಯಾಕ್ ಮೇಲ್ ಮಾಡಿದ್ದು ಯಾರು..! ಪೊಲೀಸರ ಹುಡುಕಾಟ..
1 min readಹುಬ್ಬಳ್ಳಿ: ನಗರದ ಸಿದ್ಧೇಶ್ವರ ಪಾರ್ಕನಲ್ಲಿರುವ ಲಕ್ಕೀಸ್ ಸಲೂನ್ ಮೇಲೆ ದಾಳಿ ನಡೆದು, ಸ್ಪಾ ನಡೆಸುತ್ತಿದ್ದ ಮಾಲೀಕಿಯನ್ನ ಪೊಲೀಸರು ವಿಚಾರಣೆಗಾಗಿ ತೆಗೆದುಕೊಂಡಿದ್ದು, ಅವಳೊಂದಿಗಿದ್ದ ಇಬ್ಬರು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ.
ಸ್ಪಾ ಮಾಲೀಕಿ ಸಬೀನಾ ಅಮೀನಾ ಶೇಖ ಎಂಬಾತಳು ಸ್ಪಾ ಹೆಸರಿನಲ್ಲಿ ದಂಧೆ ನಡೆಯುತ್ತಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ವಿದ್ಯಾನಗರ ಠಾಣೆ ಪೊಲೀಸರು ದಾಳಿ ಮಾಡಿ, ವಶಕ್ಕೆ ಪಡೆದಿದ್ದಾರೆ.
ಧಾರವಾಡದ ರಾಜೀವಗಾಂಧಿ ನಿವಾಸಿ ಸಬೀನಾ ಅಮೀನ್ ಶೇಖಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಹೆಸರಿಗೆ ಮಾತ್ರ ಸಲೂನ್ ಅಂತಾ ಇದ್ದ ಈ ಅಂಗಡಿಗೆ ಬರುವಂತ ಪುರುಷರಿಗೆ ಸಬೀನಾ ಹೆಣ್ಣು ಮಕ್ಕಳನ್ನು ತೋರಿಸಿ ಗಿರಾಕಿ ಕುದುರಿಸುತ್ತಿದ್ದಳೆಂದು ಹೇಳಲಾಗಿದೆ.
ಆದರೆ, ಇದಕ್ಕಿಂತ ಪೂರ್ವದಲ್ಲಿ ಕೆಲವರು ಇದೇ ಸ್ಪಾ ಬಳಿ ಹೋಗಿ ಶೂಟ್ ಮಾಡಿದ್ದೇವೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.