ಗಂಡ-ಹೆಂಡ್ತಿ ಜಗಳದಲ್ಲಿ ಬಡವಾದ ಕೋಟ್ಯಾಧೀಶ ಮಾವ: ಹೊರಬಾರದ ಸ್ಥಿತಿಗೆ ತಲುಪಿದ ಹಣವಂತ
ಮೈಸೂರು: ತನ್ನ ಗಂಡನಿಗೆ ಡೈವೋರ್ಸ್ ನೀಡಿದ್ದರೂ ಕೂಡಾ ಮಾವ ಆಸ್ತಿಯನ್ನ ಕೊಡಬೇಕೆಂದು ಮನೆಯ ಬಾಗಿಲು ಮುರಿದಿರುವ ಸೊಸೆಯ ಕೋಪವನ್ನ ನೋಡಿ ಮಾವ ಮನೆಯೊಳಗೆ ಸ್ವಯಂ ಬಂಧಿಯಾಗಿರುವ ಘಟನೆ ರೂಪಾನಗರದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಅರುಂಧತಿ ತನ್ನ ಗಂಡ ಶ್ರೀನಿವಾಸರಾಜ್ ನ್ನ 6 ವರ್ಷದ ಹಿಂದೆ ಮದುವೆಯಾಗಿದ್ದಳು. ಕಳೆದ ವರ್ಷ ದಂಪತಿಗಳಲ್ಲಿ ಬಿರುಕು ಮೂಡಿ ವಿಚ್ಚೇದನ ಪಡೆದುಕೊಂಡಿದ್ದರು. ಹಾಗಾಗಿಯೇ ಪತಿ ಶ್ರೀನಿವಾಸ ಪ್ರತಿ ತಿಂಗಳು ಜೀವನ ನಿರ್ವಹಣೆಗೆ ಹಣ ಕೊಡುತ್ತಿದ್ದ. ತಮ್ಮದೇ ಮನೆಯ ಟೆರೇಸ್ ನಲ್ಲಿ ಅವರಿಗೆ ಇರಲು ಅವಕಾಶವನ್ನೂ ಕೊಡಲಾಗಿತ್ತು.
ಆದರೆ. ಕಳೆದ ರಾತ್ರಿ ಒಮ್ಮೆಲೇ ಆಸ್ತಿಗಾಗಿ ಪಟ್ಟು ಹಿಡಿದು ಮನೆಯ ಬಾಗಿಲನ್ನೇ ಮುರಿದು ಒಳಹೋಗುವ ಪ್ರಯತ್ನ ಮಾಡಿದ್ದಾಳಂತೆ ಅರುಂಧತಿ. ಇದರಿಂದ ಹೈರಾಣಾಗಿರುವ ಮಾವ ಕೆಂಡರಾಮಶೆಟ್ಟಿ, ಭಯದಿಂದ ಹೊರಗೆ ಬರುತ್ತಿಲ್ಲ.
ಪತಿ ಪತ್ನಿಯರಲ್ಲಿ ಮೂಡದ ಒಮ್ಮತದಿಂದ ಕೋಟ್ಯಾಧೀಶ ಮಾವನ ಸ್ಥಿತಿ ಹೀಗಾಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾನವೀಯ ಸಂಬಂಧಗಳ ಬಗ್ಗೆ ತಿಳುವಳಿಕೆ ಕೊಡುತ್ತಿದ್ದಾರಂತೆ.