ನನ್ನ ತಂದೆ ಬದುಕಿದ್ದಾರೆ: ಮಾಜಿ ರಾಷ್ಟ್ರಪತಿ ಮಗನಿಗೂ ಗೋಗೆರೆಯುವ ಸ್ಥಿತಿ ತಂದಿಟ್ಟ ಸುಳ್ಳಿನ ಸರದಾರರು..!
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿ ಸಾವನ್ನಪ್ಪಿದ್ದಾರೆಂಬುದು ಸುಳ್ಳು. ಸುಳ್ಳಿನ ಪ್ಯಾಕ್ಟರಿಯಲ್ಲಿ ಹೀಗೆ ಹಬ್ಬಿಸಲಾಗುತ್ತಿದೆ. ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಣವ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ತಲೆಯಲ್ಲಿ ರಕ್ತಸೋರಿಕೆಯಿಂದ ಕೋಮಾದಲ್ಲಿರುವ ಪ್ರಣವ ಮುಖರ್ಜಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 84 ವರ್ಷದ ಪ್ರಣವರಿಗೆ ಚಿಕಿತ್ಸೆ ಮುಂದುವರೆದಿರುವಾಗಲೇ ಅವರ ಸಾವಾಗಿದೆ ಎಂದು ಕೆಲವರು ಸುದ್ದಿ ಮಾಡುತ್ತಿದ್ದಾರೆ. ಹೀಗಾಗಿ ಅವರ ಪುತ್ರ ಟ್ವೀಟ್ ಮಾಡುವ ಮೂಲಕ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಭಾರತದಲ್ಲಿ ಸುಳ್ಳಿನ ಪ್ಯಾಕ್ಟರಿಗಳು ಯಾರನ್ನೂಬಿಡೋದಿಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ದೇಶದ ರಾಷ್ಟ್ರಪತಿಯಾಗಿದ್ದ ಮಗನ ಪುತ್ರನೂ ನನ್ನ ತಂದೆ ಇನ್ನೂ ಬದುಕಿದ್ದಾರೆ ಎಂದು ಹೇಳುವಂತೆ ಮಾಡಿರುವುದು ವಿಧಿಯಾಟ.