ಸೋಮಾಪುರದ “ಹೈಸ್ಕೂಲ್” ಕಳ್ಳತನ- ಕೀ ಮುರಿದು ನುಗ್ಗಿರೋ ಕಳ್ಳರು…

ಧಾರವಾಡ: ರಾತ್ರೋರಾತ್ರಿ ರೂಂನ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್ ಸೇರಿ ಉಪಕರಣಗಳನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಸೋಮಾಪುರದಲ್ಲಿ ಸಂಭವಿಸಿದೆ.
ಭಾರತಿ ವಿಶ್ವ ಸೇವಾ ಸದನ ಪ್ರೌಢಶಾಲೆಯಲ್ಲಿ ಕಳ್ಳತನ ನಡೆದಿದ್ದು, ಆಗುಂತಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ವೀಡಿಯೋ..
ಧಾರವಾಡ ಗ್ರಾಮೀಣ ಠಾಣೆಗೆ ಪ್ರೌಢಶಾಲಾ ಆಡಳಿತ ಮಂಡಳಿ ದೂರು ನೀಡಿದ್ದು, ಆರೋಪಿಗಳ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.