ಸೋಮಾಪುರದ ಬಳಿ ಅಪಘಾತ- ರಭಸಕ್ಕೆ ಹೊಲದಲ್ಲಿಳಿದ ಕಾರು….

ಧಾರವಾಡ: ತಾಲೂಕಿನ ಸೋಮಾಪುರದ ಬಳಿ ಮಹೀಂದ್ರಾ ಪಿಕಪ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ವಾಹನಗಳು ಜಖಂಗೊಂಡು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೂಡ್ಸ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹೊಲದೊಳಗೆ ಹೋಗಿದೆ. ಕಾರಿನಲ್ಲಿದ್ದವರಿಗೆ ತರುಚಿದ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ, ಮಾಹಿತಿ ಕಲೆ ಹಾಕಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.