ಸೋಮಣ್ಣ ಬೇವಿನಮರದ ಕಾಂಗ್ರೆಸ್ ಗೆ..?- ಹೌದು.. ಭೇಟಿಯಾಗಿ ಬಂದಿದ್ದೇನೆ

ಬೆಂಗಳೂರು: ಭಾರತೀಯ ಜನತಾ ಪಕ್ಷದ ಪ್ರಮುಖ ಹಾಗೂ ಶಿಗ್ಗಾಂವ ಕ್ಷೇತ್ರ ಆಕಾಂಕ್ಷಿಯಾಗಿರುತ್ತಿದ್ದ ಸೋಮಣ್ಣ ಬೇವಿನಮರದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆಗಿಂದು ಮಾತುಕತೆ ನಡೆಸಿದ್ದಾರೆ.
ಮಾಜಿ ಸಚಿವ ಕೆ.ಬಿ.ಕೋಳಿವಾಡ ಜೊತೆಗೂಡಿ ರಾಜಧಾನಿಗೆ ಬಂದಿರುವ ಸೋಮಣ್ಣ ಬೇವಿನಮರದ, ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲವುಂಟಾಗಿತ್ತು. ನಂತರದ ದಿನಗಳಲ್ಲಿ ಸೋಮಣ್ಣ ಬೇವಿನಮರದ ಪಕ್ಷದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಮುಂದುವರೆಯಲಿಲ್ಲ.
ಇಂದು ಬೆಂಗಳೂರಿಗೆ ತೆರಳಿರುವ ಸೋಮಣ್ಣ ಬೇವಿನಮರದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಭೇಟಿಯಾಗಿ ಮಾತುಕತೆ ಮಾಡಿ ಬಂದಿದ್ದಾರೆ. ಈ ಬಗ್ಗೆ ಕರ್ನಾಟಕವಾಯ್ಸ್ ಜೊತೆ ಮಾತನಾಡಿದ ಸೋಮಣ್ಣ ಬೇವಿನಮರದ, ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಆ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದು, ನಮ್ಮ ಅಭಿಪ್ರಾಯವನ್ನ ಹೇಳಿ ಬಂದಿದ್ದೇನೆ ಎಂದಿದ್ದಾರೆ.