Posts Slider

Karnataka Voice

Latest Kannada News

ಅಕ್ಷದವ್ವನಿಗೆ “ಸೊಲ್ಲಾಪುರ ಸರ್” ಕವನ ರಚನೆ…!

1 min read
Spread the love

ಬದುಕುಬಂಡಿ ???? ????
????????????????????????????????????????

ಗೊತ್ತು ಗುರಿ ಇಲ್ಲದ ಜೀವ
ಎತ್ತಲೋ ಸಾಗಿದೆ
ಎಳೆ ಹಸುಳೆಯ ಬದುಕಿನ ಬಂಡಿ
ಮತ್ತೆಲ್ಲೋ ಹೊರಟಿದೆ |

ರೈಲು ಬಂಡಿಯನೇರಿ ಊರ
ಸೇರುವ ಮುನ್ನ
ಬಳಲಿ ಬಾಯಾರಿ ನೀರು ತರಲು
ಇಳಿದಳು ಸ್ಟೇಷನ್ನ |

ಏನೂ ತೀಳಿಯದ ಕಂದ
ಓಡಿ ಬರುವುದರೊಳಗೆ
ರೈಲು ಬಂಡಿಯು ಸಾಗಿದೆ
ದೂರದೂರಿಗೆ |

ಅತ್ತೂ ಅತ್ತೂ ಕಣ್ಣೀರು ಕೋಡಿ
ಹರಿದು ಹೋಗಿದೆ ಕೇಳಿ,
ಕೇಳುಗರು ಪುಣ್ಯದ ಫಲವಾಗಿ
ಸಾಕಿದರು ಜೋಪಾನ ಅವಳ |

ಹೆಣ್ಣು ಅಬಲೆಯನೆಂದು ನೋಯಿಸದೇ
ದೊಡ್ಡವಳನ್ನಾಗಿ ಮಾಡಿದರು
ದಿನೇದಿನೇ ಬೆಳೆದ ಬಾಲೆಯನು
ಚೆನ್ನಾಗಿ ಕಲಿಸಿದರು |

ಯವೌನಕೆ ಬಂದ ಬಾಲೆಯನು
ಮದುವೆ ಮಾಡಿದರು ಕೂಡಿ
ಬಾಲ್ಯದ ಗೆಳೆಯ ಕೈಹಿಡಿದನು;
ಅದರೊಳಗೊಬ್ಬ ನೋಡಿ |

ಕೆಲವೆ ದಿನಗಳಲ್ಲಿ ಮುರಿದು;
ಹೋಯಿತು ಮಾಂಗಲ್ಯ
ವಿಧವೆಯ ಪಟ್ಟವನೇರಿ
ಕಳಚಿತು ಅವಳ ಭಾಗ್ಯ |

ಗಟ್ಟಿಗಿತ್ತಿ ಮತ್ತೆ ಹೊಸ ಬದುಕಿನತ್ತ
ಹರಸಿದಳು ಚಿತ್ತ
ಸರಕಾರಿ ನೌಕರಿ ಸೇರಿ ಅತ್ತಿತ್ತ
ಮುಖ ಮಾಡಿದಳು ಶಾಲೆಯತ್ತ |

ಬಡಮಕ್ಕಳ ಕಲ್ಯಾಣಕ್ಕಾಗಿ
ದುಡಿದು ಹಣ್ಣಾದಳು
ಬದುಕು ಸವೆಸಿ ಸಣ್ಣಾಗಿ
ಮಕ್ಕಳಿಗೆ ನೆರಳಾದಳು |

ಸರಕಾರಿ ಮಕ್ಕಳ ಬದುಕು
ಶೃಂಗರಿಸಿ ಮಾತೆಯಾದಳು
ದತ್ತಿ ನೀಡುತ ಶಾಲೆಯುದ್ದಕೂ
ದತ್ತಿ ದಾನಿಯಾದಳು |

ಕಲ್ಮಶವಿಲ್ಲದ ಕಠೋರ ಹೃದಯ
ಸಾಗೀತು ಸಮಾಜದತ್ತ
ಸೇವೆಯೇ ಗುರಿ ಮಾಡಿಕೊಂಡು
ನಡೆದಳು ಪುಣ್ಯವಂತೆ |

ಸಮಾಜ ಲೂಸಿ ಸಾಲ್ಡಾನಾಗೆ
ಎತ್ತಿಕೊಂಡಿದೆ ಅಂಗೈಯಲ್ಲಿ
ಅವಳ ಕಣ್ಣೀರು ಬತ್ತಿಹೊಗಿ
ಸಾಗಿದೆ ಹೂನಗೆಯಲಿ |

ಕೀಲು ಕಳಚಿದ ಬಂಡಿಗೆ
ಜಡಿದಳು ಗಟ್ಟಿ
ನಡೆದಳು ಮತ್ತೆ ಸಾರಿದೂರಿಗೆ

ಸಂಘ ಕಟ್ಟಿ |

ಶ್ರೀ ಅಕ್ಬರಅಲಿ ಸೋಲಾಪೂರ
ಧಾರವಾಡ 7975605054


Spread the love

Leave a Reply

Your email address will not be published. Required fields are marked *

You may have missed