ಹುಬ್ಬಳ್ಳಿಯಲ್ಲಿ 48 ಮರಿಗಳಿಗೆ ಜನ್ಮ ನೀಡಿದ ರಸಲ್ ವೈಫರ್ ಹಾವು
1 min readಹುಬ್ಬಳ್ಳಿ: ಕೊಳಕ ಮಂಡಲ (ರಸಲ್ ವೈಫರ್) ಹಾವುಯೊಂದಕ್ಕೆ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಾಗ ಸ್ನೇಕ್ ಸಂಗಮೇಶ ಅದನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದರು. ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡುವ ವೇಳೆಯಲ್ಲಿ ಈ ಹಾವು ಸುಮಾರು 48 ಮರಿಗಳಿಗೆ ಜನ್ಮ ನೀಡಿದೆ.
ಎಲ್ಲ ಹಾವುಗಳಂತೆ ಮೊಟ್ಟೆಯನ್ನು ಹಾಕುವುದಿಲ್ಲ. ಈ ಹಾವಿನ ವಿಶೇಷ ಎಂದರೆ ಅದು ಗರ್ಭದಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಅಲ್ಲಿಯೇ ಮರಿಗಳನ್ನು ತೆಗೆದು ಜನ್ಮ ನೀಡುತ್ತದೆ ಎನ್ನುತ್ತಾರೆ ಸ್ನೇಕ್ ಸಂಗಮೇಶ.
ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು, ಸರಿಸೃಪಗಳ ಪ್ರೇಮಿಗಳಲ್ಲಿ ಕೌತುಕ ಮೂಡಿಸಿದೆ.