ಮುಗಳಿಯಲ್ಲಿ ‘26’ರ ಯುವಕ ಹಾವು ಕಡಿದು ಸಾವು…!

ಧಾರವಾಡ: ತಮ್ಮದೇ ಹೊಲದಲ್ಲಿನ ಮೋಟಾರ ಆರಂಭಿಸಲು ಹೋದ ಸಮಯದಲ್ಲಿ ವಿಷಕಾರಕ ಹಾವೊಂದು ಕಡಿದ ಪರಿಣಾಮ, ಚಿಕಿತ್ಸೆಗೆ ಹೋಗುವಾಗಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮುಗಳಿ ಗ್ರಾಮದ 26 ವಯಸ್ಸಿನ ಮುತ್ತಣ್ಣ ಮೈಲಾರ ಖಂಡೋಬನವರ ಎಂಬುವವರೇ ಸಾವಿಗೀಡಾಗಿದ್ದಾರೆ. ಹೊಲದಲ್ಲಿ ಹಾವು ಕಡಿಯುತ್ತಿದ್ದ ಹಾಗೇ ಕಿತ್ತೂರು ಆಸ್ಪತ್ರೆಗೆ ರವಾನೆ ಮಾಡುವ ಸಮಯದಲ್ಲಿಯೇ, ಮಾಧವಬಾವಿ ಗ್ರಾಮದ ಬಳಿ ಯುವಕ ಸಾವಿಗೀಡಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಯುವಕನ ಸಾವಿನಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ.