“ಮಿಲ್ಟ್ರಿ ಸೇರಲು ತಯಾರಿ” ಜಾವೂರ ಹುಡುಗನಿಗೆ ರನ್ನಿಂಗ್ ಮಾಡುವಾಗಲೇ ಕಚ್ಚಿದ ನಾಗರಹಾವು…

ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದ ಯುವಕನಿಗೆ ಹಾವು ಕಡಿತ ಆಸ್ಪತ್ರೆಗೆ ದಾಖಲು.
ನವಲಗುಂದ: ಆತ ಸೈನ್ಯ ಸೇರಬೇಕು ದೇಶ ಸೇವೆ ಮಾಡಬೇಕು ಎಂಬ ಹಂಬಲದಿಂದ ಅದಕ್ಕೇ ಪೂರ್ವಭಾವಿಯಾಗಿ ಎಲ್ಲ ರೀತಿಯಾದ ತಯಾರಿ ಮಾಡಿಕೊಳ್ಳುತ್ತಿದ ಯುವಕನೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ನವಲಗುಂದ ತಾಲೂಕಿನ ಜಾವೂರು ಗ್ರಾಮದ ಬಸವರಾಜ ನಾಯ್ಕರ ಎಂಬ ಯುವಕನೆ ಆರ್ಮಿ ಗೇ ಸೇರಬೇಕು ಎಂಬ ಹಂಬಲದಿಂದ ಎಲ್ಲ ರೀತಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದ ಅದೇ ರೀತಿ ನಿನ್ನೇ ಸಾಯಂಕಾಲ ರನ್ನಿಂಗ್ ಮಾಡುತ್ತಿದ್ದಾಗ ಗೊತ್ತಾಗದೇ ಹಾವಿನ ಮೇಲೆ ಕಾಲಿಟ್ಟಾಗ ಹಾವು ಬಸವರಾಜನ ಕಾಲಿಗೆ ಕಚ್ಚಿದೆ.
ಕೂಡಲೇ ಅಶ್ವಸ್ಥನಾದ ಬಸವರಾಜ ಮನೆಯವರಿಗೆ ಮಾಹಿತಿ ನೀಡಿದ್ದಾನೆ,ತಕ್ಷಣ ಮನೆಯವರು ಬಸವರಾಜನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.