ಕೊಡಗನ ಕೋಳಿ ನುಂಗಿತ್ತಾ.. ನೋಡವ್ವಾ ತಂಗೀ.. ಹಾವನ್ನ ಹಾವು ನುಂಗಿತ್ತಾ…!

ಹುಬ್ಬಳ್ಳಿ: ಕೊಡಗನ ಕೋಳಿ ನುಂಗಿತ್ತಾ ನೋಡವನ್ನಾ ಕೊಡಗನ ಕೋಳಿ ನುಂಗಿತ್ತಾ.. ಎಂದು ಸಂತ ಶಿಶುನಾಳ ಶರೀಫರ ಹಾಡು ಎಲ್ಲರೂ ಗುನುಗುವುದು ಸಹಜವೇ. ಆದರೆ, ಗಾಮನಗಟ್ಟಿಯಲ್ಲಿಂದು ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಬೆಳಕಿಗೆ ಬಂದಿದೆ.
ವೀಡಿಯೋ ಇದೆ ನೋಡಿ..
ಹೌದು.. ಗಾಮನಗಟ್ಟಿಯ ಶ್ರೀ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದ ಸಮೀಪದಲ್ಲಿ ನಾಗರ ಹಾವೊಂದು ಮತ್ತೊಂದು ಹಾವನ್ನ ನುಂಗಿ, ಪ್ರಾಣ ಸಂಕಟದಲ್ಲಿ ಮುಳುಗಿತ್ತು. ಆಗ, ಹಾವಿನ ಜೀವ ಉಳಿಸಲು ಬಂದಿದ್ದು, ಸ್ನೇಕ ಸಂಗಮೇಶ.
ತನ್ನಷ್ಟೇ ಉದ್ದದ ಹಾವನ್ನ ನುಂಗಿ, ತೆವಳಲು ಆಗದೇ ಅಲ್ಲಿಯೇ ಹೊರಳಾಡುತ್ತಿದ್ದ ಹಾವನ್ನ ನೋಡಿದ, ಕೆಲವರು ಸ್ನೇಕ ಸಂಗಮೇಶನಿಗೆ ಕಾಲ್ ಮಾಡಿದ ನಂತರ, ಹಾವಿನ ಪ್ರಾಣ ಉಳಿದಿದೆ.