ಕುಂದಗೋಳದ ಅಲ್ಲಾಪುರದಲ್ಲಿ….
1 min readಕುಂದಗೋಳ: ಇನ್ನೂ ಎರಡ್ಮೂರು ದಿನದಲ್ಲಿ ಇಲ್ಲೊಂದು ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮದ ಪ್ರತಿಯೊಂದು ಮನೆಗೂ ನಳದ ಮೂಲಕ ನೀರು ಬಿಡುವ ಸಮಾರಂಭಕ್ಕೆ ಚಾಲನೆ ಕೊಡಬೇಕು. ಹಾಗಾಗಿಯೇ, ನೂತನವಾಗಿ ನಿರ್ಮಾಣವಾಗಿದ್ದ ಟ್ಯಾಂಕರ್ ಗೆ ಜನರು ಇಳಿದಾಗ.. ಮತ್ತೇ ಮೇಲೇರಿ ಓಡಿ ಹೋಗುವಂತ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವೇನು ಗೊತ್ತಾ..
ಅಲ್ಲಾಪುರ ಗ್ರಾಮದಲ್ಲಿ ಕಳೆದ ಎರಡು ವರ್ಷದ ಹಿಂದೆ ನಿರ್ಮಾಣವಾದ ಪಂಪ್ ಹೌಸ್ ಬಳಿಯ ನೀರಿನ ಟ್ಯಾಂಕರಿನಲ್ಲಿ ನೀರು ತುಂಬಿಸಬೇಕು. ಅದೇ ಕಾರಣಕ್ಕೆ ಕೊಳಚೆಯನ್ನ ತೆಗೆಯಬೇಕೆಂದು ಕೆಳಗೆ ಇಳಿದಾಗ, ಸತ್ನೋ ಬಿದ್ನೋ ಎಂದು ಓಡುವಂತೆ ಮಾಡಿದ್ದು ನಾಗರಹಾವು.
ಸುಮಾರು ಹತ್ತು ಅಡಿಗೂ ಹೆಚ್ಚು ಉದ್ದವಿದ್ದ ಹಾವನ್ನ ಹೊರಗೆ ತೆಗೆಯುವುದು ದುಸ್ತರವಾಗಿತ್ತು. ಅದೇ ಕಾರಣಕ್ಕೆ ಉರಗತಜ್ಞರನ್ನ ಕರೆಯಿಸಿ, ಹಿಡಿಯುವ ಪ್ರಯತ್ನವನ್ನ ಮಾಡಲಾಯಿತು. ಸುಮಾರು ಹೊತ್ತಿನ ನಂತರ ಹಾವನ್ನ ಹಿಡಿದು ಹೊರಗೆ ಬಿಟ್ಟಿದ್ದಕ್ಕೆ, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದೇ ಟ್ಯಾಂಕರಿನಲ್ಲಿ ನೀರು ತುಂಬಿಸಿ ಪ್ರತಿದಿನವೂ ಮನೆ ಮನೆಗೆ ನೀರು ಬಿಡಲಾಗುತ್ತದೆ.