ಯಡಿಯೂರಪ್ಪ ಕಮಾಲ್ ಮುಖ್ಯಮಂತ್ರಿ: ಎಸ್.ಎಂ.ಕೃಷ್ಣ

ಬೆಂಗಳೂರು: ಕೆಲವರು ಮುಖ್ಯಮಂತ್ರಿಯಾದ ಮೇಲೆ ಕಮಾಲ್ ಮಾಡ್ತಾರೆ. ಅಂತವರ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ ನಿಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.
ಯಡಿಯೂರಪ್ಪನವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೃಷ್ಣ, ಶಿವಮೊಗ್ಗದ ಅಭಿವೃದ್ಧಿ ಮಾಡುವುದರಲ್ಲಿ ಅವರು ಕಮಾಲ್ ಮಾಡಿದ್ದಾರೆಂದರು.
ಯಡಿಯೂರಪ್ಪನವರಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ಆದರೆ, ಅದು ಕೆಲವೇ ಸಮಯದವರೆಗೆ ಮಾತ್ರ. ಆಮೇಲೆ ಶಾಂತವಾಗಿರುತ್ತಿದ್ದರೆಂದು ಕೃಷ್ಣ ಹಳೆಯ ನೆನಪುಗಳನ್ನ ಕೆದಕಿದರು.