ಒಂದೇ “ಆರ್ಡರ್” ಅದು ಎಸ್.ಎಂ.ಗುಳೇಶದ್ದು: ಹಿನ್ನೆಲೆ ಏನು… ಪೊಲೀಸ್ ಕಮೀಷನರ್ ಹೇಳಿದ್ದೇನು…

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆಯನ್ನ ಧಾರವಾಡದ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ತಕ್ಷಣವೇ ಆದೇಶ ಪಾಲಿಸುವಂತೆ ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ.
ಹುಬ್ಬಳ್ಳಿ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್‌ಕಾನ್ಸಟೇಬಲ್ ಎಸ್.ಎಂ.ಗುಳೇಶ ಅವರನ್ನ ಧಾರವಾಡದ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರ ಆದೇಶದಂತೆ “ಆಡಳಿತಾತ್ಮಕ ಹಿತದೃಷ್ಟಿಯಿಂದ” ನಮೂದು ಮಾಡಲಾಗಿದೆ. ಸಂಬಂಧಿಸಿದ ಪೊಲೀಸ್ ಠಾಣೆಯಿಂದ ರಿಲೀವ್ ಆದ ಬಗ್ಗೆಯೂ ಜ್ವಾಯಿನ್ ಆದ ಬಗ್ಗೆಯೂ ಕಚೇರಿಗೆ ತಿಳಿಸಲು ಆದೇಶ ಮಾಡಲಾಗಿದೆ.