ಸ್ಮಾರ್ಟ್ ಸಿಟಿ ಮಾಡೋರು- ಮಾಡಿಸೋರಿಗೆ ಈ ವ್ಯವಸ್ಥೆ ತೋರಸ್ರೀ ಸ್ವಲ್ಪ..!
1 min readಧಾರವಾಡ: ಕೇಂದ್ರ ಸರಕಾರ ಸ್ಮಾರ್ಟ್ ಸಿಟಿಯನ್ನಾಗಿ ಹುಬ್ಬಳ್ಳಿ-ಧಾರವಾಡವನ್ನ ಆಯ್ಕೆ ಮಾಡಿಕೊಂಡಿದ್ದೇ ಕೊಂಡಿದ್ದು, ಮತ್ತೇನು ಅಲ್ಲಿ ಕಾಣುತ್ತಲೇ ಇಲ್ಲ. ಮಳೆಯಾದ್ರೇ ಸಾಕು, ಹೊಂಡಗಳು ನಿರ್ಮಾಣವಾಗ್ತವೆ. ಜನ ಮಾತ್ರ ಯಾರಿಗೇಳೋಣ ನಮ್ಮ ಪ್ರಾಬ್ಲೂಂ ಎಂದುಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ..
ನಿಮಗೆ ಜನರ ಬಗ್ಗೆ ಕಾಳಜಿಯಿದ್ದರೇ, ಈ ಮಾಹಿತಿಯನ್ನ ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಿ. ಯಾಕಂದ್ರೇ ಧಾರವಾಡದಲ್ಲಿ ಮಳೆಯಾದರೇ ಸಾಕು, ಮರಾಠಾ ಕಾಲನಿಯ ಪ್ರಮುಖ ರಸ್ತೆಯಲ್ಲಿ ತಾತ್ಕಾಲಿಕ ಕೆರೆ ನಿರ್ಮಾಣವಾಗಿರತ್ತೆ. ಜನ, ವಾಹನ ಸಂಚರಿಸಲು ಪರದಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶ್ರೀ ದುರ್ಗಾದೇವಿ ಮಂದಿರದಿಂದ ಬರುವ ಗಟಾರಿನ ನೀರು ಇದೇ ರಸ್ತೆಗೆ ಬರತ್ತೆ. ಇನ್ನೂ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದವರ ಮನೆ ಕಡೆಯಿಂದಲೂ ಇದೇ ರಸ್ತೆಯಲ್ಲಿ ನೀರು ಬಂದು, ಇಲ್ಲಿ ಕೆರೆಯಾಗಿಸುತ್ತೆ. ಇಂತಹದೇ ಸ್ಥಿತಿ ಧಾರವಾಡದ ಟೋಲನಾಕಾ ಬಳಿಯೂ ಇದೆ.
ಟೋಲನಾಕಾದ ಬಳಿಯಂತೂ ದ್ವಿಚಕ್ರವಾಹನದವರು ದಾಟದ ಹಾಗೇ ನೀರು ನಿಂತಿರುತ್ತೆ. ಯಾರಾದರೂ ಅದ್ರಲ್ಲಿ ಹೋದರೇ ಪ್ರಾಣಾಪಾಯದ ಚಿಂತೆ ಬೇರೆ. ಹೀಗಾಗಿ ಸ್ಮಾರ್ಟ್ ಸಿಟಿ ಮಾಡುತ್ತಿರುವ ಮೇಧಾನಿಗಳು ಮತ್ತೂ ಇದನ್ನ ಮಾಡಿಸುತ್ತಿರುವ ಜನಪ್ರತಿನಿಧಿಗಳು, ಒಮ್ಮೆ ಬಂದು ಈ ಎರಡು ಜಾಗಗಳನ್ನ ನೋಡಿ ಹೋಗಿ.. ಸರಿ ಮಾಡಿಸಿ.. ಜನರು ನೆಮ್ಮದಿಯಿಂದ ಇರ್ತಾರೆ.