ಸೋಮಾಪುರದ ಬಳಿ ಟ್ರ್ಯಾಕ್ಟರ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ನಾಲ್ವರು ರೈತರು
ಧಾರವಾಡ: ಹೊಲಕ್ಕೆ ಬಿತ್ತನೆ ಮಾಡಲು ಟ್ರ್ಯಾಕ್ಟರನಲ್ಲಿ ಹೊರಟಿದ್ದ ನಾಲ್ವರು ರೈತರು ಪ್ರಾಣಾಪಾಯದಿಂದ ಪಾರಾದ ಘಟನೆ ಮಟ್ಟಿಬಾವಿಯ ಸಮೀಪ ನಡೆದಿದೆ.
ಹೊಲಕ್ಕೆ ಟ್ರ್ಯಾಕ್ಟರನಲ್ಲಿ ಹೊರಟ ಸಮಯದಲ್ಲಿ ಲಾಂಗ್ ಚೆಸ್ಸಿ ಲಾರಿ ಮುಂದೆ ಬಂದಿದೆ. ಇದನ್ನ ತಪ್ಪಿಸಲು ಹೋಗಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಬಿತ್ತನೆಗೆ ಬಳಸುವ ಉಪಕರಣಗಳು ನೆಲಕ್ಕೆ ಹತ್ತಿದ್ದರಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.