ಸ್ಲಿಮ್ ಆಗಲು ಹೋಗಿ ಪ್ರಾಣ ಕಳೆದುಕೊಂಡ ನಟಿ: ಕಿಟೋ ಡಯಟ್..
ಬೆಂಗಳೂರು: ಸ್ಲಿಮ್ ಆಗಿ, ಆಕರ್ಷಕವಾಗಿ ಕಾಣಲು ಇತ್ತೀಚೆಗೆ ಯುವತಿಯರು ಏನೆಲ್ಲ ಸರ್ಕಸ್ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಡಯಟ್, ಜಿಮ್, ವ್ಯಾಯಾಮದ ಮೊರೆ ಹೋಗುತ್ತಾರೆ. ಆದರೆ, ಅತಿಯಾದ ಡಯಟ್ ಕೂಡ ಪ್ರಾಣಾಪಾಯ ತಂದೊಡ್ಡುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅತಿಯಾದ ಡಯಟ್ ಮೊರೆ ಹೋದ ಬಾಲಿವುಡ್ ನಟಿಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಬಾಲಿವುಡ್ ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದ ನಟಿ ಮಿಷ್ಠಿ ಮುಖರ್ಜಿ ಮೃತಪಟ್ಟಿರುವ ಉದಯೋನ್ಮುಖ ನಟಿ.
ಮಿಷ್ಠಿ ಮುಖರ್ಜಿಗೆ ಕಿಡ್ನಿ ಸಮಸ್ಯೆಯಿತ್ತು. ಆದಾಗ್ಯೂ ಸ್ಲಿಮ್ ಆಗಲು ಕಟ್ಟುನಿಟ್ಟಿನ ಕಿಟೋ ಡಯಟ್ ಮಾಡುತ್ತಿದ್ದರು. ಇದರಿಂದಾಗಿ ಆಕೆ ಕಿಡ್ನಿಯ ಮೇಲೆ ಇನ್ನಷ್ಟು ಒತ್ತಡ ಹೆಚ್ಚಿದೆ. ಇದೀಗ ಎರಡೂ ಕಿಡ್ನಿ ವೈಫಲ್ಯದಿಂದ ಮಿಷ್ಠಿ ತಮ್ಮ 27ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.
ಮಿಷ್ಠಿ ಮುಖರ್ಜಿ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, 2012ರಲ್ಲಿ ಲೈಫ್ ಕಿ ತೋಹ್ ಲಾಗ್ ಗಯೀ ಎಂಬ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಾಲಿವುಡ್ ನ ಕೆಲ ಚಿತ್ರಗಳಲ್ಲಿ ಹಾಗೂ ಬೆಂಗಾಲಿ ಆಲ್ಬಂ ಸಾಂಗ್ ಗಳಲ್ಲಿ ನಟಿಸಿದ್ದರು.