ಶಿರಸಿ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿಗೂ ಪಾಸಿಟಿವ್..! ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 40 ಪ್ರಕರಣ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 40 ಪಾಸಿಟಿವ್ ವರದಿಯಾಗಿದೆ. ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ 15 ಜನ ಸಿಬ್ಬಂದಿಗಳಿಗೆ ಪಾಸಿಟಿವ್ ವರದಿಯಾಗುವ ಮೂಲಕ ದೇವಿಯ ಭಕ್ತರಿಗೆ ಕೊರೋನಾ ಮಹಾಮಾರಿ ಶಾಕ್ ನೀಡಿದೆ. ದೇವಸ್ಥಾನದ ಪಕ್ಕದ ಮನೆಯಲ್ಲಿದ್ದ ಪಿ.23156 ಸೋಂಕಿತನಿಗೆ ಮೊದಲು ಸೋಂಕು ಕಾಣಿಸಿಕೊಂಡಿದ್ದು ಈತ ಪ್ರತಿ ದಿನ ದೇವರ ದರ್ಶನಕ್ಕೆ ಬರುವ ಮೂಲಕ ಇಲ್ಲಿನ ಸಿಬ್ಬಂದಿಗೂ ಸೋಂಕು ಹಬ್ಬಿಸಿದ್ದಾನೆ. ಪಿ.23156 ರ ಸಂಪರ್ಕದಿಂದ ಆತನ ಕುಟುಂಬದವರು ಸೇರಿ 21 ಜನ ಸೋಂಕಿತರಾಗಿದ್ದು ಶಿರಸಿಯೊಂದರಲ್ಲೇ ಇಂದು 25 ಪಾಸಿಟಿವ್ ಬರುವ ಜೊತೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇನ್ನೂ
ಶಿರಸಿಯ ಕೆಡಿಸಿಸಿ ಬ್ಯಾಂಕ್ ನ ಮೂರು ಜನ ಸಿಬ್ಬಂದಿಗೂ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯ ಮುಂಡಗೋಡ -2, ಕುಮಟಾ-2, ಕಾರವಾರ-2, ಹಳಿಯಾಳ -6 ,ಹೊನ್ನಾವರ-2 , ಭಟ್ಕಳ -1 ಕೊರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ 585ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 227 ಜನ ಸೋಂಕಿನಿಂದ ಗುಣಮುಖರಾಗಿದ್ದು, 354ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕೊರೋನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.