Posts Slider

Karnataka Voice

Latest Kannada News

ಬಾರದ ಲೋಕಕ್ಕೆ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾ: ನಾಳೆ ಅಂತ್ಯಕ್ರಿಯೆ

1 min read
Spread the love

ರಾಯಚೂರು: ಜಿಲ್ಲೆಯ ಖ್ಯಾತ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾ (57) ಇಂದು ನಿಧನರಾದರು.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ ದಾದಾಪೀರ್ ಅವರು ರಾಜ್ಯದಲ್ಲಿ ತಮ್ಮದೇ ಹೆಗ್ಗುರುತು ಮೂಡಿಸಿದ್ದರು. ತಮ್ಮದೇ ಗಾಯನದ 100ಕ್ಕೂ ಹೆಚ್ಚು ಸಿಡಿಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು.
ಮೃತರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ. ಸ್ವಗ್ರಾಮದಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ


Spread the love

Leave a Reply

Your email address will not be published. Required fields are marked *