ಸಿದ್ಧೇಶ್ವರ ಶ್ರೀಗಳ ಪ್ರವಚನ ಆರಂಭ: ಸಾವಿರಾರೂ ಭಕ್ತರು ಭಾಗಿ

ಹುಬ್ಬಳ್ಳಿ: ವಿಜಯಪುರದ ಜ್ಞಾನಯೋಗಾಸನದ ಸಿದ್ಧೇಶ್ವರ ಶ್ರೀಗಳ ಪ್ರವಚನ ಗೋಕುಲ ಗ್ರಾಮದ ರೇವಡಿಹಾಳ ರಸ್ತೆಯ ಬಸವತಂಪ್ಪ ಹೊಸಮನಿ ಅವರ ಹೊಲದಲ್ಲಿ ಆರಂಭಗೊಂಡಿತು.
ಇಂದಿನಿಂದ ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರ ವರೆಗೆ ನಡೆಯಲಿರುವ ಪ್ರವಚನದಲ್ಲಿ ಸಾವಿರಾರೂ ಭಕ್ತರು ಭಾಗಿಯಾಗಿದ್ದರು. ಒಂದು ತಿಂಗಳವರೆಗೆ ಶ್ರೀಗಳು ಇಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅದಕ್ಕಾಗಿಯೇ ಒಂದು ಮನೆಯನ್ನ ನಿರ್ಮಾಣ ಮಾಡಲಾಗಿದೆ. ಭಕ್ತರು ಪ್ರತಿದಿನವೂ ಶ್ರೀಗಳನ್ನ ಭೇಟಿಯಾಗುವ ಅವಕಾಶವನ್ನು ಕಲ್ಪಿಸಲಾಗಿದೆ.
ಭಕ್ತಾಧಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಾರಿಗೆ ಇಲಾಖೆಯು ಜಿಲ್ಲೆಯ ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ.