ಶ್ರೀಶೈಲಕ್ಕೆ ಸಧ್ಯ ಬರಬೇಡಿ: ಶ್ರೀಶೈಲ ಜಗದ್ಗುರು

ಯಕ್ಸಂಬಾ: ದೇಶದಲ್ಲಿ ಭಯಾನಕವಾದ ಕರೋನಾ ವೈರಸ್ ಹರಡುತ್ತಿರುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಶೈಲಕ್ಕೆ ಬರುವ ಭಕ್ತರು ಯಾತ್ರೆಯನ್ನ ಸ್ಥಗಿತಗೊಳಿಸುವಂತೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಭಾಗವಹಿಸಲು ಜನರು ಪಾದಯಾತ್ರೆ ಹೊರಡುತ್ತಿದ್ದಾರೆ. ಅವರೆಲ್ಲರೂ ತಕ್ಷಣವೇ ರದ್ದುಗೊಳಿಸಿ, ಮನೆಯಲ್ಲಿರಬೇಕು. ಕರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ತಗುಲುವುದರಿಂದ ತೊಂದರೆಯಾಗುವ ಲಕ್ಷಣವಿದೆ. ಹೀಗಾಗಿ ಯಾರೂ ಜಾತ್ರೆಗೆ ಬರುವುದು ಸೂಕ್ತವಲ್ಲವೆಂದು ಸ್ವಾಮೀಜಿಗಳು ತಿಳಿಸಿದ್ದಾರೆ.