“ಹವಾಲ್ದಾರ್ ಹತ್ಯೆ” ಪ್ರಮುಖ ಆರೋಪಿಗೆ “ಶೂಟೌಟ್”: Exclusive video!

ಕಲಬುರಗಿ: ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಸಮಯದಲ್ಲಿ ನಡೆದ ಮುಖ್ಯ ಪೇದೆಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾಯಿಬಣ್ಣ ಎಂಬಾತನಿಗೆ ಪೋಲಿಸರು ಫೈರ್ ಮಾಡಿದ್ದಾರೆ.
Exclusive video
ಕಲಬುರಗಿಯ ಮಂದೇವಾಲ ಬಳಿ ಶೂಟೌಟ್ ನಡೆದಿದ್ದು ಕಾಲಿಗೆ ಗುಂಡೇಟು ತಿಂದಿರುವ ಆರೋಪಿ ಸಾಯಬಣ್ಣನನ್ನು ಕಲಬುರಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿಯ ಮಂದೇವಾಲ ಬಳಿ ಆರೋಪಿಯನ್ನು ಬಂಧಿಸಲು ಹೋದಾಗ ಪೋಲಿಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಖಾಕಿ ಟೀಂ ಆರೋಪಿ ಕಾಲಿಗೆ ಗುಂಡೇಟು ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ಟ್ಯ್ರಾಕ್ಟರ್ ತಪಾಸಣೆ ವೇಳೆ ನೇಲೋಗಿ ಠಾಣೆಯ ಮುಖ್ಯ ಪೇದೆ ಚವ್ಹಾಣ್ ನನ್ನು ಆರೋಪಿಗಳು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ರು. ಘಟನೆಗೆ ಸಂಭಂಧಿಸಿದಂತೆ ಚಾಲಕ ಸಿದ್ದಪ್ಪ ಎಂಬಾತನನ್ನು ಪೋಲಿಸರು ಅರೆಸ್ಟ್ ಮಾಡಿದ್ರು. ಇಂದು ಮತ್ತೊರ್ವ ಆರೋಪಿ ಸಾಯಬಣ್ಣನನ್ನು ಕಾಲಿಗೆ ಗುಂಡೇಟು ನೀಡಿ ಬಲೆಗೆ ಕೆಡವಿದ್ದಾರೆ.