ಪೊಲೀಸ್ ವ್ಯವಸ್ಥೆಯನ್ನೇ ಕ್ವಾರಂಟೈನ್ ಮಾಡಿದ ಕೊರೋನಾ ಪಾಸಿಟಿವ್ ಪ್ರಕರಣ: ಎಸ್ಪಿ ಕಚೇರಿ ಸೀಲ್ ಡೌನ್ ಆಗಿಲ್ಲ
1 min readಶಿವಮೊಗ್ಗ: ಶಿಕಾರಿಪುರ ಪ್ರಕರಣ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಕ್ವಾರಂಟೈನ್ ಗೆ ದೂಡಿದೆ. ಶಿವಮೊಗ್ಗದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಕ್ವಾರಂಟೈನ್ ಗೆ ತಳ್ಳಿದಂತಾಗಿದೆ. ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಶಿವಮೊಗ್ಗದ ಹೆಚ್ಚುವರಿ ಎಸ್ಪಿ, ಸೇರಿದಂತೆ 10 ಪ್ರಮುಖ ಅಧಿಕಾರಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
ಶಿವಮೊಗ್ಗದ ಹೆಚ್ಚುವರಿ ಎಸ್ಪಿ, ನಗರ ಡಿಎಸ್ಪಿ, ಶಿಕಾರಿಪುರ ಡಿಎಸ್ಪಿ, ಡಿಸಿಆರ್ಬಿಯ ಡಿಎಸ್ಪಿ, ತೀರ್ಥಹಳ್ಳಿಯ ಡಿಎಸ್ಪಿ ಸಾಗರದ ಡಿಎಸ್ಪಿ ಹಾಗೂ ಆರು ಸಿಪಿಐರವರು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧಿತ ಬೆಂಗಳೂರಿನಿಂದ ಎಎಸ್ಪಿ, ಸೇರಿದಂತೆ ಆರು ಡಿಎಸ್ಪಿಗಳಿಗೆ ನೇಮಕ ಮಾಡಲಾಗಿದೆ.
ಎಸ್ಪಿ ಕಛೇರಿಯಲ್ಲಿ ಮೊನ್ನೆ ಮೀಟಿಂಗ್ ನಡೆದಿದ್ದ ಕಾರಣ, ಎಸ್ಪಿ ಆಫೀಸ್ ನ್ನು ಸಂಪೂರ್ಣ ಔಷಧಿ ಸಿಂಪಡಣೆ ಮಾಡಿದ್ದು ಸ್ವಚ್ಛಗೊಳಿಸಿದ್ದಾರೆ. ಈ ಹಿನ್ನೆಲೆ ನಿನ್ನೆ ಎಸ್ಪಿ ಕಛೇರಿಯನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕ ಹಾಗೂ ಕಾನೂನು ವ್ಯವಸ್ಥೆ ಕಾಪಾಡುವ ಕಛೇರಿಯನ್ನು ಹೇಗೆ ಸೀಲ್ ಡೌನ್ ಮಾಡಲು ಸಾಧ್ಯ.. ಎಸ್ಪಿ ಕಛೇರಿ ಸೀಲ್ ಡೌನ್ ಸುಳ್ಳು ಸುದ್ದಿ ಇಂತಹ ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.