ಪಿಜಿ ನಡೆಸುತ್ತಿರುವ ಡಿಸಿ ಖಡಕ್ ಎಚ್ಚರಿಕೆ: ಹಣ ಪಡೆದರೇ ಕೇಸ್ ಬಿಳೋದು ಗ್ಯಾರಂಟಿ
1 min readಶಿವಮೊಗ್ಗ: ಪಿಜಿ ನಡೆಸುತ್ತಿರು ಪಿಜಿ ಮಾಲೀಕರಿಗೆ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಲಗೇಜ್ ಇಟ್ಟು ಊರಿಗೆ ಹೋದವರಿಗೆ ಹಣ ಪಡೆಯುವ ಹಾಗಿಲ್ಲ. ಲಗೇಜ್ ಇಟ್ಟು ಊರುಗಳಿಗೆ ತೆರಳಿದ ಪಿಜಿಗಳಿಂದ ಮಾಲೀಕರು ಒತ್ತಾಯಪೂರ್ವಕವಾಗಿ ಹಣ ಪಡೆದರೇ ಪಿಜಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೆಲವೊಂದು ಪಿಜಿ ಮಾಲೀಕರು, ಪಿಜಿಗಳಲ್ಲಿದ್ದವರಿಗೆ ಹಣ ಪಡೆಯಲು ಮುಂದಾಗುತ್ತಿದ್ದಾರೆ. ಅಂತಹ ದೂರುಗಳು ಬಂದ್ರೇ, ತಕ್ಷಣ ಕಾನೂನು ಕ್ರಮ ಜರುಗಿಸಲಾಗತ್ತೆ ಎಂದಿದ್ದಾರೆ.
ಆಟೋ ಹಾಗೂ ಟ್ಯಾಕ್ಸಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಕೆಲವೊಂದು ಸೂಚನೆಯನ್ನ ನೀಡಲಾಗಿದೆ. ಆಟೋದಲ್ಲಿ ಚಾಲಕ ಹಾಗೂ ಪ್ರಯಾಣಿಕರ ನಡುವೆ ತೆಳು ಪ್ಲಾಸ್ಟಿಕ್ ಶೀಟ್ ಅಳವಡಿಕೆ ಕಡ್ಡಾಯ. ಮಾಸ್ಕ್ ಧರಿಸದೆ ಬರುವ ಪ್ರಯಾಣಿಕರಿಗೆ ಹತ್ತಿಸುವಂತ್ತಿಲ್ಲ. ಒಂದು ವೇಳೆ ಪ್ರಯಾಣಿಕರನ್ನ ಕೂರಿಸಿಕೊಂಡರೆ ಚಾಲಕರೇ ಮಾಸ್ಕ್ ನೀಡಬೇಕು. ಇಬ್ವರಿಗಿಂತ ಹೆಚ್ಚು ಜನರನ್ನು ಹಾಕುವ ಹಾಗಿಲ್ಲ. ಈ ನಿಯಮ ಇಂದಿನಿಂದಲ್ಲೇ ಜಾರಿಯಾಗಿದೆ. ಆರ್ ಟಿ ಒ ಮತ್ತು ಸಂಚಾರಿ ಪೊಲೀಸ್ ರಿಂದಲೇ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.