ಭಾವೈಕ್ಯತೆಯ ಮೊಹರಂ “ಶಿವಳ್ಳಿ”ಯಲ್ಲಿ ಮನಸಾರ್ಪಣೆಯ ಹುಲಿ ಕುಣಿತ…
1 min readಧಾರವಾಡ: ಹಬ್ಬ-ಹರಿದಿನಗಳು ಮನುಷ್ಯರನ್ನ ಬೆಸೆಯಬೇಕು. ಸಾರಮಸ್ಯ ಮೂಡಿಸಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಳೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದ್ದು, ಅದರಲ್ಲಿ ಹುಲಿ ಕುಣಿತ ಹಲವು ವಿಶೇಷತೆ ಹೊಂದಿದೆ.
ವೀಡಿಯೋ..
ಧರ್ಮ ಯಾವುದಾದರೇನು. ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನ ಸಾರುವ ಮೊಹರಂ ಹಬ್ಬ ಶಿವಳ್ಳಿಯಲ್ಲಿ ನಡೆಯುತ್ತೆ. ಇಡೀ ನಾಡಿಗೆ ಒಳ್ಳೆಯದಾಗಲಿ ಎಂದು ಬಯಸುತ್ತ ಎಲ್ಲ ಧರ್ಮದವರು ಆಚರಣೆ ಗ್ರಾಮ ಸಾಮರಸ್ಯವನ್ನ ಬೆಸೆಯುತ್ತಲೇ ಬಂದಿದೆ.