ಶಿವಳ್ಳಿ ಪಿಡಿಓ ಜೈಲುಪಾಲು: ಲಂಚದಾಟದ ಕಂಪ್ಲೀಟ ವರದಿ..
1 min readಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತನ್ನ ಪತಿ ಸಮೇತ ಜೈಲುಪಾಲಾಗಿದ್ದು, ಇವರಿಬ್ಬರು ಕಾರಾಗೃಹ ವಾಸಕ್ಕೆ ಕಾರಣವಾದ ಸಂಪೂರ್ಣವಾದ ಮಾಹಿತಿಯಿಲ್ಲಿದೆ ನೋಡಿ..
ಪಂಚಾಯತಿ ಪಿಡಿಓ ಪುಷ್ಪಾ ಮೇದಾರ, ಶಿವಳ್ಳಿಯ ಗ್ರಾಮದ ಹೊರವಲಯದಲ್ಲಿರುವ ಎಸ್.ಎಸ್.ಡೆವಲಪರ್ಸ್ ಜಮೀನಿನನ್ನ ಎನ್.ಎ ಮಾಡಿಕೊಡಲು ಹಣವನ್ನ ಹುಬ್ಬಳ್ಳಿ ಮೂಲದ ಸಾಗರ ಹೂಗಾರ ಎಂಬುವವರಿಗೆ ಹಣದ ಬೇಡಿಕೆಯನ್ನ ಇಟ್ಟಿದ್ದರು.
ಎನ್.ಎಗೆ ಸಂಬಂಧಿಸಿದಂತೆ 20 ಸಾವಿರ ರೂಪಾಯಿಯ ಬೇಡಿಕೆಯಿಟ್ಟಿದ್ದ ಪಿಡಿಓಗೆ ಹಣವನ್ನ ಕೊಡಲು ಶಿವಳ್ಳಿ ಗ್ರಾಮಕ್ಕೆ ಬಂದಿದ್ದ ಹೂಗಾರ, ಎಂಬುವವರನ್ನ ಧಾರವಾಡಕ್ಕೆ ಬರುವಂತೆ ಹೇಳಿದ್ದಾರೆ. ಧಾರವಾಡಕ್ಕೆ ಸಾಗರ ಹೋದ ಮೇಲೆ, ತಾನು ಮನೆಯಲ್ಲಿರುವುದಾಗಿ ಹೇಳಿದ ಪಿಡಿಓ ಪುಷ್ಪಾ ಮೇದಾರ, ತನ್ನ ಪತಿಯನ್ನ ತಾಲೂಕು ಕಚೇರಿ ಬಳಿ ಕಳಿಸಿ ಹಣ ಪಡೆಯುವಂತೆ ಮಾಡಿದ್ದಾಳೆ.
ತಾಲೂಕು ಕಚೇರಿ ಬಳಿಯ ಕ್ಯಾಂಟಿನ್ ಹೊರಗಡೆ ಪಿಡಿಓ ಪತಿ ಮಹಾಂತೇಶ ಮೇದಾರ ಹಣ ಪಡೆಯುತ್ತಿದ್ದಾಗ ಎಸಿಬಿ ದಾಳಿ ಮಾಡಿದೆ. ಇದರಿಂದ ಗಲಿಬಿಲಿಗೊಂಡ ಪತಿ, ತನ್ನ ಹೆಂಡತಿ ಕಳಿಸಿದ್ದಾಳೆಂದು ಹೇಳಿದ್ದರಿಂದ ಎಸಿಬಿ ಅಧಿಕಾರಿಗಳು, ಪಿಡಿಓ ಮೇದಾರರವರ ಸಪ್ತಾಪುರ ನಿವಾಸಕ್ಕೋಗಿ ಮೇದಾರರನ್ನ ಬಂಧನ ಮಾಡಿದ್ದಾರೆ.
ಪಿಡಿಓ ಪುಷ್ಪಾ ಮೇದಾರ ಅವರ ಲಂಚದಾಟದಲ್ಲಿ ಪತಿಯು ನೇರವಾಗಿ ಭಾಗವಹಿಸುತ್ತಿದ್ದನೆಂಬುದು ಎಸಿಬಿ ದಾಳಿಯಿಂದ ಹೊರ ಬಿದ್ದಿದೆ. ಇನ್ನೂ ಹಲವು ರೀತಿಯಲ್ಲಿ ತನಿಖೆ ನಡೆಯುತ್ತಿದ್ದು, ಅನೇಕ ಗುತ್ತಿಗೆದಾರರು ಪಂಚಾಯತಿ ಹಣ ಪಡೆದಿರುವ ಬಗ್ಗೆಯೂ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಕೆಲಸ ಮಾಡಿದ ಗುತ್ತಿಗೆದಾರರಲ್ಲಿ ನಡುಕ ಹುಟ್ಟಿಸಲಿದೆ.