ಶಿವಳ್ಳಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಕವಲಗೇರಿ ರೈತ ನೇಣಿಗೆ ಶರಣು…

ಧಾರವಾಡ: ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಮಾಡಿದ ಸಾಲ ತೀರಿಸಲಾಗಲ್ಲ ಎಂದು ನೊಂದ ರೈತನೋರ್ವ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಇಂದು ಬೆಳಕಿಗೆ ಬಂದಿದೆ.
ಮೂವರು ಮಕ್ಕಳನ್ನ ಹೊಂದಿರುವ ಬಸವರಾಜ ಮಹದೇವಪ್ಪ ತೋಟಗೇರ ಎಂಬುವವರೇ ನೇಣಿಗೆ ಶರಣಾದ ನತದೃಷ್ಟ ರೈತ.
ಶಿವಳ್ಳಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಎರಡು ಲಕ್ಷ ರೂಪಾಯಿ ಸಾಲ ಸೇರಿದಂತೆ ವಿವಿಧ ಕಡೆ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದರೆಂದು ಹೇಳಲಾಗಿದೆ. ಮೂರುವರೆ ಎಕರೆ ಜಮೀನಿನಲ್ಲಿ ಏನೂ ಬಾರದ್ದರಿಂದ ಮನಸ್ಸಿಗೆ ಘಾಸಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.