ಹೆಬ್ಬಳ್ಳಿ ರಸ್ತೆಯಲ್ಲಿ ರಕ್ತಸಿಕ್ತ ಹೆಣ… ಕೊಲೆಯೋ…? ಅಪಘಾತವೋ…?

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ಹೆಬ್ಬಳ್ಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಅನುಮಾನಸ್ಪದ ರೀತಿಯಲ್ಲಿ ಸೋಮವಾರ ಬೆಳಗಿನ ಜಾವ ಕಂಡು ಬಂದಿದೆ.

ಸುಮಾರು 35 ರಿಂದ 40 ವಯಸ್ಸಿನ ವ್ಯಕ್ತಿಯು ತೀವ್ರವಾದ ಪೆಟ್ಟಿನಿಂದ ಸಾವಿಗೀಡಾಗಿರೋ ಶಂಕೆಯಿದೆ. ರಸ್ತೆಯ ಮಧ್ಯದಲ್ಲಿ ಹಾಕಿಕೊಂಡಿದ್ದ ಚಪ್ಪಲಿಗಳು ಬಿದ್ದಿದ್ದು ಅಲ್ಲಿಯೂ ಕೂಡಾ ರಕ್ತಸ್ರಾವವಾಗಿದೆ.
ಚಪ್ಪಲಿ ಬಿಟ್ಟ ಸ್ಥಳಕ್ಕೂ ಬಿದ್ದು ಸಾವಿಗೀಡಾಗಿರೋ ಸ್ಥಳಕ್ಕೂ ಅಂತರವಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಸಾಧ್ಯತೆಯಿದೆ. ಬೆಳಗಿನ ಜಾವ ಗ್ರಾಮದವರು ನಿತ್ಯ ಕರ್ಮಕ್ಕಾಗಿ ಹೊರಗಡೆ ಹೋಗುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿಯನ್ನ ನೀಡಲಾಗಿದ್ದು, ಅವರು ಬಂದ ನಂತರವೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಬೇಕಿದೆ.
ಸಾವಿಗೀಡಾಗಿರೋ ವ್ಯಕ್ತಿಯ ಕಿಸೆಯಲ್ಲಿ ಮದ್ಯದ ಬಾಟಲು ಇರುವುದು ಕೂಡಾ ಕಂಡು ಬರುತ್ತಿದ್ದು, ಕುಡಿತದ ಮತ್ತಿನಲ್ಲಿ ಬಡಿದಾಡಿಕೊಂಡು ಹೀಗೆ ಆಗಿದೇಯಾ ಎಂಬ ಸಂಶಯ ಮೂಡಿದೆ.