ಶಿವಳ್ಳಿ ಮೊದಲ ವಾರ್ಡ್: ಚೆನ್ನು ಪಾಟೀಲ ಅಳಿಯ ಗೆಲುವು
1 min readಧಾರವಾಡ: ತೀವ್ರ ಹಣಾಹಣಿಗೆ ಕಾರಣವಾಗಿದ್ದ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚೆನ್ನು ಪಾಟೀಲ ಅವರ ಅಳಿಯ ಶಿವಾನಂದ ಮುದ್ದಿ ಗೆಲುವು ಸಾಧಿಸಿದ್ದು, ಇನ್ನುಳಿದಂತೆ ಮೂವರು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಶಿವಳ್ಳಿ ಗ್ರಾಮದ ಮೊದಲನೇಯ ವಾರ್ಡಿನಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಮತಗಳನ್ನ ಪಡೆದು ಶಿವಾನಂದ ಮುದ್ದಿ ವಿಜಯಶಾಲಿಯಾಗಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಶಿವಾನಂದ ಲಂಬಿ, ಸರೋಜಾ ಚಿಕ್ಕಮಠ, ಶಂಕ್ರವ್ವ ಸಣ್ಣಮುದ್ದಿ ಗೆಲುವು ಬಹುತೇಕ ಖಚಿತವಾಗಿದೆ.
ಮತಗಳ ವಿವರ
ಶಿವಾನಂದ ಮುದ್ದಿ- 609
ಶಂಕ್ರೆವ್ವ ಸಣ್ಣಮುದ್ದಿ- 456
ಸರೋಜಾ ಚಿಕ್ಕಮಠ- 515
ಶಿವಾನಂದ ಲಂಬಿ- 555