ಶಿವಳ್ಳಿಯಲ್ಲೂ ಶಿವಕುಮಾರ ಪದಗ್ರಹಣ ವೀಕ್ಷಣೆ: ಕಾರ್ಯಕರ್ತರ ಹುಮ್ಮಸ್ಸು
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲೈನ್ ಕಾರ್ಯಕ್ರಮವನ್ನ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಿಂದ ವೀಕ್ಷಿಸಿ, ಪಕ್ಷದ ಬಲವರ್ಧನೆಗೆ ಶಪಥ ಮಾಡಿದರು.
ಗ್ರಾಮದ ಮನೆಯೊಂದರಲ್ಲಿ ಟಿವಿಗಳ ಮೂಲಕ ಲೈವ್ ಕಾರ್ಯಕ್ರಮವನ್ನ ವೀಕ್ಷಣೆ ಮಾಡಿದ ಕಾರ್ಯಕರ್ತರು, ಪಕ್ಷದ ಧ್ವಜವನ್ನ ಹಿಡಿದು ಸಂತಸ ಹಂಚಿಕೊಂಡರು.
ಕಾಂಗ್ರೆಸ್ ಪಕ್ಷದ ಬಲವನ್ನ ಹೆಚ್ಚು ಮಾಡಲು ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷವನ್ನ ಬೆಳೆಸಬೇಕೆಂದು ಕರೆ ನೀಡಿದ ಮುಖಂಡರ ಕರೆಯನ್ನ ಈಡೇರಿಸುವ ಸಂಕಲ್ಪ ಮಾಡಿಕೊಂಡರು.
ಶಿವಾನಂದ ಮುದ್ದಿ, ಮುತ್ತು ವಸ್ತ್ರದ, ಮಹದೇವ ಬೆಳವಗಿ, ಮುದಕಪ್ಪ ಹಲಗಿ, ಎಂ.ಎನ್.ತಾರಿಹಾಳ, ಮುದಕಪ್ಪ ಬಿಲ್ಲಿಂಗನವರ, ಕರೆಪ್ಪ ತಳವಾರ, ಈರಣ್ಣ ಹಡಪದ, ಬುಡ್ಡೇಸಾಬ ಜಮಾದಾರ, ಸುರೇಶ ಮುದ್ದಿ ಸೇರಿದಂತೆ ಹಲವರು ಭಾಗಿಯಾಗಿದ್ದರು.