ಚಂದ್ರಯಾನ-3: “ಶಿವಳ್ಳಿ”ಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ “ದೇಶಪ್ರೇಮಿ”ಗಳು…

ಧಾರವಾಡ: ಚಂದ್ರಯಾನ-3 ರ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಆಚರಣೆ ಮಾಡಿದರು.
ದೇಶದ ಕೀರ್ತಿಯನ್ನ ವಿಶ್ವದಲ್ಲಿ ಫಸರಿಸುವಂತಹ ಯಶಸ್ಸು ಸಾಧಿಸಿದ ವಿಜ್ಞಾನಿಗಳಿಗೆ ಜಯಘೋಷ ಹಾಕಿ, ಪಟಾಕಿ ಸಿಡಿಸಿ ಸಂತಸವ್ಯಕ್ತಪಡಿಸಿದರು.
ಗ್ರಾಮದ ಮಂಜೂರ ಅಲಿ ತಾರಿಹಾಳ, ಜಯಣ್ಣ ಮುದ್ದಿ , ಬಸಪ್ಪ ಶಿರಗುಪ್ಪಿ, ಚನ್ನಪ್ಪ ಮುದ್ದಿ, ರಮೇಶ್ ಲಂಬಿ, ಮಂಜುನಾಥ ಭೊಮ್ಮನ್ನವರ, ಗೌಡಪ್ಪ ಹಾರೊಬೆಳವಡಿ, ರಾಜು ಧಾರವಾಡ ಸೇರಿದಂತೆ ಗ್ರಾಮದ ಹಲವರು ಸಡಗರದಲ್ಲಿ ಭಾಗವಹಿಸಿದ್ದರು.