ಶಿವಳ್ಳಿಯಲ್ಲೂ ಕೃಷಿ ಸಮೀಕ್ಷೆ: ಆ್ಯಪ್ ಮೂಲಕ ರೈತರಿಗೆ ಬೆಳೆ ಮಾಹಿತಿ
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಸರಕಾರ ಹೊಸದಾಗಿ ಆರಂಭಿಸಿರುವ ಆ್ಯಪ್ ಮೂಲಕ ಬೆಳೆ ಸಮೀಕ್ಷೆಯ ಮಾಹಿತಿಯನ್ನ ಗ್ರಾಮದಲ್ಲಿ ಅಧಿಕಾರಿಗಳು ನೀಡಿದರು.
ಗ್ರಾಮದ ಶ್ರೀ ಬೀರದೇವರ ದೇವಸ್ಥಾನದಲ್ಲಿ ರೈತಾಪಿ ಜನರಿಗೆ ಮಾಹಿತಿ ನೀಡಿದ ಅಧಿಕಾರಿಗಳಾದ ಲಕ್ಕಮ್ಮನವರ ಮತ್ತು ಸವಿತಾ ತಡಕೋಡ, ಸರಕಾರದ ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಕೋರಿದರು.
ನಂತರ ಗ್ರಾಮದ ಹೊಲಗಳಿಗೆ ತೆರಳಿದ ಅಧಿಕಾರಿಗಳು ಆ್ಯಪ್ ಮೂಲಕ ಹೇಗೆ ಎಲ್ಲದರ ಮಾಹಿತಿ ಒದಗಿಸಬೇಕೆಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವು ಬೆಳಾರದ, ಗ್ರಾಮದ ರೈತರಾದ ಗದಿಗೆಪ್ಪ ಮುದ್ದಿ, ಕೊಟೇಪ್ಪ ಬಂಡೆಣ್ಣವರ, ನಿಂಗಪ್ಪ ಲಂಕೆಣ್ಣವರ, ರಾಜು ಪಾಟೀಲ, ಬಸುರಾಜ ಕದಂ, ಅರ್ಜುನ ಹದ್ಲಿ, ಮುದಕಪ್ಪ ಮಾಂಡ್ವೆ, ವಿಠ್ಠಲ ದರಾಯಿ, ಈರಣ್ಣ ಮುದ್ದಿ, ರಹೀಮಾನಸಾಬ ನದಾಫ, ನಾಮದೇವ ಶಿಂಪಿ, ರಾಮಣ್ಣ ಬಡಿಗೇರ, ಶೇಕಪ್ಪ ಮುದ್ದಿ, ಪರಮೇಶ್ವರ ಧಾರವಾಡ, ಅಶೋಕ ಮುದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.